ನಾಗನೂರು: ಗ್ರಾಮೀಣ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು. ಕ್ರೀಡಾಪಟುಗಳಿಗೆ ಸೌಕರ್ಯ ಒದಗಿಸುವಲ್ಲಿ ಸರ್ಕಾರ ಹಾಗೂ ಸಂ&ಸಂಸ್ಥೆಗಳು ಸಹಾಯ ನೀಡಬೇಕೆಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಪಟ್ಟಣದಲ್ಲಿ ಜಿಲ್ಲಾ ಪಂಚಾಯಿತಿ, ಚಿಕ್ಕೋಡಿ ಶಾಲಾ ಶಿಣ ಇಲಾಖೆ ಉಪನಿರ್ದೇಶಕರ ಕಾರ್ಯಾಲಯ, ಮೂಡಲಗಿ ೇತ್ರ ಶಿಣಾಧಿಕಾರಿಗಳ ಕಾರ್ಯಾಲಯ ಹಾಗೂ ನಾಗನೂರದ ಶ್ರೀ ಮಹಾಲಿಂಗೇಶ್ವರ ಶಿಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ 14&17 ವಯೋಮಾನದ ವಿದ್ಯಾರ್ಥಿಗಳ ಬೆಳಗಾವಿ ವಿಭಾಗಮಟ್ಟದ ಹಾಗೂ ಬಾಲಕ&ಬಾಲಕಿಯರ ರಾಜ್ಯಮಟ್ಟದ ಖೋಖೋ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ತಂದೆ ಸತೀಶ ಜಾರಕಿಹೊಳಿ ಅವರು ಗ್ರಾಮೀಣ ಕ್ರೀಡಾಪಟುಗಳಿಗಾಗಿ ಸತೀಶ ಶುಗರ್ಸ್ ಅವಾರ್ಡ್ ಹೆಸರಿನಡಿ ಕ್ರೀಡೆ, ಸಾಂಸತಿಕ ಹಾಗೂ ಶೈಣಿಕವಾಗಿ ಕಾರ್ಯಕ್ರಮ ಹಮ್ಮಿಕೊಂಡು ಪ್ರೋತ್ಸಾಹಿಸುತ್ತಿದ್ದಾರೆ. ಕ್ರೀಡಾಪಟುಗಳು ಖೇಲೋ ಇಂಡಿಯಾ, ಒಲಿಂಪಿಕ್ಸ್ನಂತಹ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಂಡು ದೇಶಕ್ಕೆ ಕೀರ್ತಿ ತರಬೇಕು. ವಿಜೇತರಿಗೆ ಶಿಷ್ಯವೇತನ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಲ್ಲಿ ನೌಕರಿ ಅವಕಾಶಗಳಿವೆ ಎಂದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಉಪಾಧ್ಯ ಗಜಾನನ ಮನ್ನಿಕೇರಿ ಮಾತನಾಡಿ, ಸತೀಶ ಜಾರಕಿಹೊಳಿ ಅವರ ಪ್ರಯತ್ನದಿಂದಾಗಿ ಈ ಭಾಗದ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ವಿದೇಶದಲ್ಲೂ ಸಾಧನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಚಿಕ್ಕೋಡಿ ಡಿಡಿಪಿಐ ಸೀತಾರಾಮು ಆರ್.ಎಸ್ ಮಾತನಾಡಿ, ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಶಾಲೆ, ಶಿಕರು ಹಾಗೂ ಊರಿನ ನತೆ ಹೆಚ್ಚಿಸಬೇಕು ಎಂದರು.
ಭಗೀರಥ ಶಿಣ ಸಂಸ್ಥೆ ಅಧ್ಯ ಪಿ.ಎಲ್.ಬಾಬಲಿ, ಮೂಡಲಗಿ ಬಿಇಒ ಪ್ರಕಾಶ ಹಿರೇಮಠ ಮಾತನಾಡಿದರು. ಕ್ರೀಡಾ ಜ್ಯೋತಿ ಬರಮಾಡಿಕೊಳ್ಳಲಾಯಿತು. ಗಣ್ಯರಿಗೆ ಸನ್ಮಾನ ಮಾಡಲಾಯಿತು.
ಶ್ರೀ ಮಹಾಲಿಂಗೇಶ್ವರ ಶಿಣ ಸಂಸ್ಥೆ ಅಧ್ಯ ಬಸನಗೌಡ ಪಾಟೀಲ, ಜಿಲ್ಲಾ ಖೋ ಖೋ ಅಸೋಸಿಯೇಷನ್ ಜಿಲ್ಲಾಧ್ಯ ಗಜಾನನ ಯರಗಣವಿ, ಜುನೇದಿ ಪಟೇಲ, ಶಾಂತರಾಮ ಜೋಗುಳೆ, ಎಸ್.ಬಿ.ಹಳಿಗೌಡರ, ಮಹಾವೀರ ಜೀರಗ್ಯಾಳ, ಎಲ್.ಕೆ.ತೋರಣಗಟ್ಟಿ, ಯತಿರಾಜ, ರಾಜು ಹಿರೇಮಠ, ಎಸ್.ಎಂ.ಲೋಕಣ್ಣವರ, ಮಾಲತೇಶ ಸಣ್ಣಕ್ಕಿ, ಜಿನೇಂದ್ರ ನೀಲಜಿಗಿ, ಎಸ್.ಎಲ್.ಹೊಸಮನಿ, ಎಸ್.ಬಿ.ಹೊಸಮನಿ, ಬಿ.ಬಿ.ಪಾಟೀಲ, ಎಲ್.ಬಿ.ಸಕ್ರೆಪ್ಪಗೋಳ, ಬಿ.ಬಿ.ಗಿಡ್ಡಗೌಡ್ರ, ಬಿ.ಎಂ.ಬಂಡಿ, ಎಸ್.ಕೆ.ಸಕರೆಪ್ಪಗೋಳ, ಸಿ.ಎ.ಸಕ್ರೆಪ್ಪ ಗೋಳ, ಟಿ.ಎಸ್.ಸಗರಿ, ಎ.ಪಿ.ಪರಸನ್ನವರ, ಎಂ.ಎಂ.ಮಾವಿನಗಿಡದ, ಮಹೇಶ ಕಟ್ಟಿಮನಿ, ಎಸ್.ಎಂ.ನಾಗನೂರ, ಎಸ್.ಎ.ಹಮ್ಮನವರ, ಎಸ್.ಬಿ.ಕೇದಾರಿ, ಬಿ.ಎಂ.ಬಂಡಿ ಇತರರಿದ್ದರು. ಸಾನ್ವಿ ನಾಯಕವಾಡಿ ಭರತನಾಟ್ಯ ಪ್ರದರ್ಶಿಸಿದರು. ಚೈತ್ರಾ ವಸದ ಹಾಗೂ ಸಹನಾ ಬೆಳಕೂಡ ಸ್ವಾಗತಿಸಿದರು. ಶಿಕ ಆರ್.ಎಂ.ಗೂಡಸಿ ನಿರೂಪಿಸಿದರು. ಶಿಕ್ಷಕ ಎಸ್.ಆರ್.ಬಾಗಡೆ ವಂದಿಸಿದರು.