ಮುರಗೋಡ: ವಿದ್ಯಾರ್ಥಿಗಳು ಮಾನಸಿಕ ನೆಮ್ಮದಿ ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡಾ
ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಸಮೀಪದ ಹಾರುಗೊಪ್ಪ ಸರ್ಕಾರಿ ಪ್ರೌಢಶಾಲೆ ಮೆದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸವದತ್ತಿ ತಾಲೂಕುಮಟ್ಟದ ಪ್ರೌಢಶಾಲೆಗಳ ಥ್ರೋಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೆಹಿಕ ಸಾಮರ್ಥ್ಯ ಹೆಚ್ಚಿಸುವ ಶಕ್ತಿ ಕ್ರೀಡೆಗಳಿಗಿದ್ದು, ಆಟೋಟಗಳಲ್ಲಿ ಸೋಲು&ಗೆಲುವು ಮುಖ್ಯವಲ್ಲ. ಭಾಗವಹಿಸಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವುದು ಮುಖ್ಯ ಎಂದರು.
ಎಸ್ಡಿಎಂಸಿ ಅಧ್ಯ ವಿಠ್ಠಲ ಸೂರಪ್ಪನವರ ಉದ್ಘಾಟಿಸಿದರು. ವಿಜೇತ ಮಕ್ಕಳಿಗೆ ಪ್ರಶಸ್ತಿಪತ್ರ ಮತ್ತು ಪದಕ ವಿತರಿಸಲಾಯಿತು. ದೆಹಿಕ ಶಿಕ್ಷಣ ಶಿಕರಾದ ಎಂ.ಸಿ.ತಲ್ಲೂರ, ಶಿವಾನಂದ ಅರಬಾವಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ಎಸ್.ವಿ.ಯರಡ್ಡಿ, ಬಿಇಒ ಎ.ಎ.ಮುಲ್ಲಾ, ಗ್ರಾಪಂ ಅಧ್ಯೆ ಚನ್ನವ್ವ ಕುಲಗೋಡ, ಸಿ.ಬಿ.ಜಕ್ಕನ್ನವರ, ಶಿವಾನಂದ ನೀಲಪ್ಪನ್ನವರ, ಸಿದ್ದಪ್ಪ ಕುಲಗೂಡ, ವೀರಭದ್ರ ಚಚಡಿ, ವಿಠ್ಠಲ ಕಾಗಿ, ಕೀರಪ್ಪ ಕರೆನ್ನವರ್, ಚಿದಾನಂದ ಪೂಜೇರಿ, ಸವಿತಾ ಬಡ್ಡಿವಡ್ಡರ, ಎಂ.ಬಿ.ಮಾಳಗಿ, ಬಸವರಾಜ ಪಟ್ಟಣ, ಎ್.ವೈ.ಮಾರಿಹಾಳ, ಮಹೇಶ ಅಂಗಡಿ, ವಿ.ಎ್. ಮರಿತಮ್ಮನವರ ಇತರರಿದ್ದರು.