ಜಿಲ್ಲೆ

ಮಕ್ಕಳಲ್ಲಿ ಪರಿಸರ ಪ್ರೀತಿ ಬೆಳೆಸೋಣ

ಮಮದಾಪುರ: ಮಕ್ಕಳಿಗೆ ಆಟದ ಜತೆ ಪಾಠ ಕಲಿಸಲು ಬೇಸಿಗೆ ಶಿಬಿರ ಹಮ್ಮಿಕೊಂಡಿದ್ದು, ಪರಿಸರ ಪ್ರೀತಿ ಮತ್ತು ಕಾಳಜಿ ಬೆಳೆಸಿ ಮಾನವೀಯ ಮೌಲ್ಯ ರೂಪಿಸಿಕೊಳ್ಳುವುದಕ್ಕೆ ಬೇಕಾಗುವ ಎಲ್ಲ ಅಂಶಗಳನ್ನು ಹೇಳಿಕೊಡಲಾಗುವುದು ಎಂದು ಬೆಳಗಾವಿ ಜಿಪಂ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಹೇಳಿದರು.

ಕೊಳವಿ ಗ್ರಾಮದ ಗ್ರಂಥಾಲಯದಲ್ಲಿ ಜಿಪಂ, ತಾಪಂ ಗೋಕಾಕ ಹಾಗೂ ಗ್ರಾಪಂ ಸಹಯೋಗದಲ್ಲಿ ಏ.24ರಿಂದ ಮೇ24ರ ವರೆಗೆ ಆಯೋಜಿಸಿರುವ ಬೇಸಿಗೆ ಸಂಭ್ರಮ ಕಾರ್ಯಕ್ರಮಕ್ಕೆ ಅಬ್ದುಲ್​ ನಜೀರ್​ಸಾಬ್​ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗುರುವಾರ ಉದ್ಘಾಟಿಸಿ ಮಾತನಾಡಿದರು.

ಗೋಕಾಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಸ್ತೆ ಮಾತನಾಡಿ, ಮಕ್ಕಳ ಗ್ರಾಮಸಭೆ, ಮಕ್ಕಳಿಗೆ ಚಟುವಟಿಕೆಗಳನ್ನು

ಗ್ರಂಥಾಲಯ ಮೂಲಕ ಶಾಲಾ ಶಿಣ ಇಲಾಖೆಯಿಂದ ನಿರಂತರವಾಗಿ ರೂಪಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಿಗೆ ಸಕಲ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಮಕ್ಕಳಿಗೆ ವೇದಿಕೆ ಕಲ್ಪಿಸಲಾಗುತ್ತಿದೆ ಎಂದರು.

ತಹಸೀಲ್ದಾರ್​ ಡಾ.ಮೋಹನ ಭಸ್ಮೆ ಮಾತನಾಡಿದರು. ೇತ್ರ ಶಿಣಾಧಿಕಾರಿ ಜಿ.ಬಿ.ಬಳಗಾರ ಪ್ರಾಸ್ತಾವಿಕ ಮಾತನಾಡಿದರು. ಪಿಡಿಒ ಸಂಜು ಕುಮಾರ ಜೋತಾವರ, ಗ್ರಾಪಂ ಅಧ್ಯ ಕರೆಪ್ಪ ಬಡಿಗವಾಡ, ಉಪಾಧ್ಯೆ ಶೋಭಾ ಗಡ್ಡಿಹೊಳಿ, ಬಸವರಾಜ ಹಟ್ಟಿಗೌಡರ, ಮಾರುತಿ ಹಂಜಿ, ರಾಮಣ್ಣ ಖಾನಾಪುರ, ಅಡಿವೆಪ್ಪ ಬೊಮ್ಮಣ್ಣವರ, ಬಿ.ಎಸ್​. ನಂದೆಪ್ಪನವರ, ಕೆ.ಕೆ.ಹೊಳಕರ, ಮಾಣಿಕ ಹಿರಟ್ಟಿ, ಬಾಳಯ್ಯ ಪೂಜೇರಿ, ಬಾಳಪ್ಪ ಮಾರಿಹಾಳ ಇತರರು ಇದ್ದರು.

ಮಕ್ಕಳೊಂದಿಗೆ ಬೆರೆತ ಅಧಿಕಾರಿಗಳು: ಜಿಪಂ ಉಪ ಕಾರ್ಯದರ್ಶಿ, ತಹಸೀಲ್ದಾರ್​ ಹಾಗೂ ತಾಪಂ ಇಒ ಅವರು ಸರ್ಕಾರಿ ಕನ್ನಡ ಶಾಲೆಯಲ್ಲಿ ಮಕ್ಕಳ ಜತೆ ಲಗೋರಿ, ಹಗ್ಗ ಜಗ್ಗಾಟ, ಸಿಂಗಿಂಗ್​ ಹಾಗೂ ಗ್ರಂಥಾಲಯದಲ್ಲಿ ಚೆಸ್​, ಕೇರಂ ಆಡಿ ಮಕ್ಕಳನ್ನು ಪ್ರೋತ್ಸಾಹಿಸಿದರು.

"ಗ್ರಾಮೀಣ ಆಟಗಳಿಗೆ ಉತ್ತೇಜನ: ಬೇಸಿಗೆ ಶಿಬಿರವು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1ರ ವರೆಗೆ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಸಾಂಪ್ರದಾಯಿಕ ಗ್ರಾಮೀಣ ಆಟ, ಮೋಜಿನ ಆಟ, ರಂಗೋಲಿ, ಕೇರಂ, ಚೆಸ್​, ಏಕಾಂಗಿ ನತ್ಯ ಹಾಗೂ ನೆತಿಕ ಶಿಣ, ಸರಳ ಓದು ಹಾಗೂ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಂಥಪಾಲಕಿ ಮಲ್ಲವ್ವ ಪಾಟೀಲ ವಿಜಯವಾಣಿ ಪತ್ರಿಕೆಗೆ ತಿಳಿಸಿದರು.