filter: 0; fileterIntensity: 0.0; filterMask: 0; captureOrientation: 0; module: photo; hw-remosaic: false; touch: (-1.0, -1.0); modeInfo: ; sceneMode: 8; cct_value: 5617; AI_Scene: (-1, -1); aec_lux: 40.0; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 34; 
ಜಿಲ್ಲೆ

ಕ್ರೀಡಾ ಮನೋಭಾವ ಬೆಳೆಸಿಕೊಳ್ಳಲಿ

ರಾಘವೇಂದ್ರಗೌಡ ಭೀ ಪಾಟೀಲ್

ನೇಸರಗಿ: ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದು ಮಾಜಿ ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.

ಸಮೀಪದ ಮದನಬಾವಿ ಗ್ರಾಮದಲ್ಲಿ ಚನ್ನವಷಬೇಂದ್ರ ದೇವರಕೊಂಡ ಅಜ್ಜನವರ ಜಾತ್ರೆ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಮೀಣ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಕ್ರೀಡೆಗಳು ಇಂದು ಕಣ್ಮರೆಯಾಗುತ್ತಿದ್ದು, ಅವುಗಳಿಗೆ ಜೀವಕಳೆ ತುಂಬಿ ಯುವಕರು ಕ್ರೀಡೆಯತ್ತ ಒಲವು ತೋರಿಸಬೇಕಿದೆ. ಯವಜನರು ದುಶ್ಚಟಗಳಿಗೆ ಅಂಟಿಕೊಂಡಿದ್ದು, ಅವುಗಳಿಂದ ಹೊರಬಂದು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಈರನಗೌಡ ದೊಡಗೌಡರ, ಎನ್.ಸಿ. ಸಿದ್ಧಮ್ಮನವರ, ಚನಗೌಡ ಹಾದಿಮನಿ, ಅಶೋಕ ಹೊಸೂರ, ಶಿವಪ್ಪ ಗುಜನಾಳ, ಗ್ರಾಪಂ ಸದಸ್ಯ ಯಲ್ಲನಗೌಡ ದೊಡಗೌಡ್ರ, ಸೋಮಪ್ಪ ಗುಜನಾಳ, ಮಲ್ಲಿಕಾರ್ಜುನ ಉಳ್ಳೇಗಡ್ಡಿ, ಕಿರಣ ಪಾಟೀಲ, ನಿಂಗನಗೌಡ ದೊಡಗೌಡರ, ರಜನಿಕಾಂತ ಬಾಳಿಗಡ್ಡಿ, ನಾಗರಾಜ ನಂಜರಗಿ, ಪ್ರದೀಪ ದೊಡಗೌಡರ ಇತರರಿದ್ದರು.