ಗೋಕಾಕ: ರಂಗ ಕಲಾವಿದರನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಜ್ಞಾನ ಮಂದಿರದಲ್ಲಿ ಆಶಾಕಿರಣ ಕಲಾಟ್ರಸ್ಟ್ ಶನಿವಾರ ಹಮ್ಮಿಕೊಂಡಿದ್ದ ರಂಗ ಸ್ಮರಣೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲಾವಿದರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಮಾಲತಿಶ್ರೀ ಅವರು ಕಲೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕಾರ್ಯ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚು ಕಲಾವಿದರು ಗೋಕಾಕಕ್ಕೆ ಬರಲಿ. ಕಲಾವಿದರನ್ನು ಆಶಾ ಕಿರಣ ಕಲಾ ಟ್ರಸ್ಟ್ ಪ್ರೋತ್ಸಾಹಿಸುತ್ತಿರುವುದು ಮಾದರಿ ಎಂದರು.
ರಂಗಭೂಮಿ ಭೀಷ್ಮ ದಿ. ಬಸವಣ್ಣೆಪ್ಪ ಹೊಸಮನಿ ರಂಗ ಪ್ರಶಸ್ತಿಯನ್ನು ಹಿರೇಬಿದರಿಯ ಕಲಾವಿದ ಮಲ್ಲೇಶಪ್ಪ ಬೀರಾಳ ಹಾಗೂ ರಂಗಭೂಮಿ ದ್ರೋಣ ದಿ. ಬಿ.ಆರ್.ಅರಿಷಿಣಗೋಡಿ ರಂಗ ಪ್ರಶಸ್ತಿಯನ್ನು ವಿಜಯಪುರದ ಕಲಾವಿದ ಎಸ್.ಎಂ. ಖೇಡಗಿ ಅವರಿಗೆ ಪ್ರದಾನ ಮಾಡಲಾಯಿತು.
ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಅಧ್ಯತೆ, ಅರಬಾವಿಯ ಗುರುಬಸವಲಿಂಗ ಶ್ರೀಗಳು, ಬೆಲಹೊಂಗಲದ ಡಾ.ಮಹಾಂತೇಶ ಶಾಸ್ತ್ರಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ತಹಸೀಲ್ದಾರ್ ಡಾ.ಮೋಹನ ಭಸ್ಮೆ, ಅಖಿಲ ಭಾರತ ಸಾಹಿತ್ಯ ಪರಿಷತ್ ಜಿಲ್ಲಾಧ್ಯ ಮಹಾಂತೇಶ ತಾವಂಶಿ, ಸಿರಿಗನ್ನಡಂ ಮಹಿಳಾ ವೇದಿಕೆ ರಾಜ್ಯಾಧ್ಯೆ ರಜನಿ ಜರಗ್ಯಾಳ, ಕಿರುತರೆ ಕಲಾವಿದ ಶ್ರೀನಾಥ ವಶಿಷ್ಠ, ಪ್ರೊ.ಚಂದ್ರಶೇಖರ ಅಕ್ಕಿ, ರವಿ ಅರಿಷಿಣಗೋಡಿ, ಕಲಾಟ್ರಸ್ಟ್ ಅಧ್ಯೆ ಮಾಲತಿಶ್ರೀ ಮೈಸೂರು, ಅಣ್ಣಪ್ಪ ಕಟಕರಿ ಇದ್ದರು.