ದೇವದುರ್ಗ: ಪಾಲಕರು ಹೆಣ್ಣು ಗಂಡು ಎಂಬ ಭೇದ ಮಾಡದೆ ಇಬ್ಬರನ್ನೂ ಸಮನಾಗಿ ಕಾಣಬೇಕು. ಮಹಿಳೆಯರು ಸಂಸಾರ ನಡೆಸುವುದು ಮಾತ್ರವಲ್ಲ ಜಗತ್ತು ಆಳುವ ಶಕ್ತಿ ಹೊಂದಿದ್ದಾರೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಹೇಳಿದರು.
ಇದನ್ನೂ ಓದಿ: ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮುಖ್ಯ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತು ಸತ್ಯ. ಆಧುನಿಕ ಯುಗದಲ್ಲಿ ಹೆಣ್ಣು ಮಗು ಸಂಸಾರಕ್ಕೆ ಹೊರೆಯಲ್ಲ. ಸಂಸಾರ ನಡೆಸುವ ಯಜಮಾನಿ. ಉತ್ತಮ ಶಿಕ್ಷಣ ನೀಡಿದರೆ ಪುರುಷರ ಸಮನಾಗಿ ದುಡಿಯಬಲ್ಲರು ಎಂಧರು.
ಭ್ರೂಣ ಲಿಂಗ ಪತ್ತೆ ಕಾನೂನು ಬಾಹಿರ ಚಟುವಟಿಕೆಯಾಗಿದ್ದು, ಸಾಬೀತಾದರೆ ವೈದ್ಯರು ಮತ್ತು ಕುಟುಂಬಸ್ಥರಿಗೆ ಕಾರಾಗೃಹ ಶಿಕ್ಷೆ ಜತೆಗೆ ದಂಡ ವಿಧಿಸಲಾಗುತ್ತದೆ. ಹೆಣ್ಣು ಮಕ್ಕಳನ್ನು ಉಳಿಸಿ ಗೌರವ ನೀಡಬೇಕು. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಗೆ ಹೆಣ್ಣುಮಕ್ಕಳೇ ಹೆಚ್ಚಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದರು.
ವೈದ್ಯಾಧಿಕಾರಿ ನಿರ್ಮಲಾ, ಮಕ್ಕಳ ತಜ್ಞ ಡಾ.ಶಿವಕುಮಾರ್, ಹೆರಿಗೆ ಮತ್ತು ಸ್ತ್ರೀರೋಗ ತಜ್ಞೆ ಡಾ.ಬಸವರಾಜೇಶ್ವರಿ, ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನಬಸಯ್ಯ, ಬಿಎಚ್‌ಇಒ ಗೀತಮ್ಮ, ವೈದ್ಯರಾದ ಶ್ರುತಿ ವಾರದ್, ಶ್ರುತಿ ಹುಲಿಗೇರಿ, ಗಂಗಾಧರ, ಶ್ರೀದೇವಿ, ಆಯೇಷಾ ನಿಲೋಫರ್ ಹಾಗೂ ಪುರ್ಖಾನ್ ನಬಿ, ಶಿವಪ್ಪ, ರಂಗಮ್ಮ, ಮಹಾದೇವಿ, ಜ್ಯೋತಿ, ಅರುಣಾ, ಯಾಸ್ಮಿನ್, ಕರಿಯಮ್ಮ, ಕವಿತಾ, ಶಾಂತಾ, ವನಿತಾ ಇದ್ದರು.