ನಗರದ ಕೆಎಲ್​ಎಸ್​ನ ಗೋಗಟೆ ತಾಂತ್ರಿಕ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಜರುಗಿತು. ಡಾ. ಕೆ.ಜಿ. ಗುಪ್ತ, ರಾಜೇಂದ್ರ ಬೆಳಗಾವ್ಕರ , ಎಂ.ಎಸ್​. ಪಾಟೀಲ ಇತರರಿದ್ದರು. 
ಜಿಲ್ಲೆ

ಪರಿಸರ ಸಂರಕ್ಷಣೆಗೆ ಬದ್ಧರಾಗಲಿ: ಡಾ. ಕೆ.ಜಿ. ಗುಪ್ತ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಬೆಳಗಾವಿ: ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಗೋವಾದ ಇಂಜಿನಿಯರಿಂಗ್​ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಜಿ.ಗುಪ್ತ ಅಭಿಪ್ರಾಯಪಟ್ಟರು.

ನಗರದ ಕೆಎಲ್​ಎಸ್​ ಗೋಗಟೆ ತಾಂತ್ರಿಕ ಕಾಲೇಜಿನಲ್ಲಿ ಸಿವಿಲ್​ ಇಂಜಿನಿಯರಿಂಗ್​ ವಿಭಾಗದಿಂದ ಗುರುವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಪರಿಸರ ಸಂರಕ್ಷಣೆಗೆ ಯುವ ಸಮುದಾಯ ನಿರಾಸಕ್ತಿ ತೋರಿಸುತ್ತಿದೆ. ಯುವಜನರಲ್ಲಿ ಪರಿಸರ ಸಂರಕ್ಷಣೆ, ಮಾಲಿನ್ಯ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಾಗಾರಗಳು ಅವಶ್ಯವಾಗಿವೆ. ಹಾಗಾಗಿ ಎಲ್ಲರೂ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದರು.

ಸಂಸ್ಥೆಯ ಚೇರ್ಮನ್​ ರಾಜೇಂದ್ರ ಬೆಳಗಾಂವ್ಕರ ಮಾತನಾಡಿ, ಸಂಸ್ಥೆಯಲ್ಲಿ ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್​ ಬಳಕೆ ನಿಷೇಧದ ಬಗ್ಗೆ ಸಾಕಷ್ಟು ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸುವ ಕಾರ್ಯಗಳು ನಿರಂತರ ನಡೆಯುತ್ತಲಿವೆ ಎಂದು ತಿಳಿಸಿದರು. ಪ್ರಾಂಶುಪಾಲ ಡಾ. ಎಂ.ಎಸ್​. ಪಾಟೀಲ್​, ಪ್ರೊ.ರಾಜನಿ ತೋಗರ್ಸಿ, ಅರಣ್ಯ ಉಪ ವಲಯ ಅಧಿಕಾರಿ ಡಿ.ಎಸ್​.ಭಾಂಡಿ ಇತರರಿದ್ದರು.