ಸವದತ್ತಿ: ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆ ನಿಯಮಗಳಿಗೆ ಬದ್ಧವಾಗಿ ಶಾಂತ ರೀತಿಯಿಂದ ಹಬ್ಬ ಆಚರಿಸಬೇಕು ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ತಿಳಿಸಿದರು.
ಇಲ್ಲಿನ ಗುರುಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ಮಾತನಾಡಿ, ಸಾರ್ವಜನಿಕ ಗಣಪತಿ ವಿಗ್ರಹ ಪ್ರತಿಷ್ಠಾಪನೆ ಕೈಗೊಳ್ಳುವ ಮಂಡಳಿಗಳಿಗೆ ಒಂದೇ ಕಡೆ ಎಲ್ಲ ಪರವಾನಗಿ ನೀಡಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗಾ ವಹಿಸಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಡಿಜೆ ನಿಷೇಧಿಸಲಾಗಿದೆ ಎಂದರು.
ಡಿವೈಎಸ್ಪಿ ಚಿದಂಬರ ಮಡಿವಾಳರ ಮಾತನಾಡಿ, ಗಣೇಶ ಮಂಟಪದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿಕೊಳ್ಳುವುದು ಉತ್ತಮ ಎಂದರು.
ಪಿಐ ಧರ್ಮಾಕರ ಧರ್ಮಟ್ಟಿ, ಮಲ್ಲು ಬೀಳಗಿ, ಎ್.ಎಂ.ನದ್ಾ, ಪಿಎಸ್ಐ ಕಲ್ಮೇಶ ಬನ್ನೂರ, ಅಪರಾಧ ವಿಭಾಗ ಪಿಎಸ್ಐ ಲಕ್ಷ$್ಮಣ ಗೌಡಿ, ಹೆಸ್ಕಾಂ ಎಇಇ ವಿಶಾಪೂರಕರ, ಪುರಸಭೆ ಆರೋಗ್ಯಾಧಿಕಾರಿ ಚಂದ್ರಶೇಖರ ಮಲಕನ್ನವರ, ಲಕ್ಷ$್ಮಣ ಕುಲಕರ್ಣಿ, ಕೆ.ಕೆ.ಪುಣೆದ, ಮಲ್ಲು ಬೀಳಗಿ, ಅಮೀರ ಗೊರೇನಾಯ್ಕ, ಮೌಲಾಸಾಬ್ ತಬ್ಬಲಜಿ, ರಾಜು ಚುಳಕಿ, ರಾವೇಂದ್ರ ಪೂಜೇರ ಇತರರಿದ್ದರು.