RAGHAVENDRA KUSTIGIA 
ಜಿಲ್ಲೆ

ಬೆಂಬಲ ಬೆಲೆಯಲ್ಲಿ ಒಣಮೆಣಸಿನಕಾಯಿ ಖರೀದಿಸಲಿ ಏ.೨೦ ವರೆಗೆ ಕಾಲುವೆಗೆ ನೀರು ಹರಿಸಿ

ರಾಯಚೂರು  ತುಂಗಭದ್ರಾ ಎಡದಂಡೆ ನಾಲೆಯ ವ್ಯಾಪ್ತಿಯ ಮಾನ್ವಿ,ಸಿರವಾರ ಹಾಗೂ ರಾಯಚೂರು ತಾಲೂಕುಗಳಲ್ಲಿ ರೈತರು ಬೇಸಿಗೆ ಬೆಳೆಯಾಗಿ ಭತ್ತ ಬೆಳೆದಿದ್ದು ತೆನೆ ಬಿಡುವ ಹಂತದಲ್ಲಿದ್ದು, ಏ.೨೦ರವರೆಗೆ ಕಾಲುವೆಗೆ ನೀರು ಹರಿಸಬೇಕು ಹಾಗೂ ಒಣಮೆಣಸಿನಕಾಯಿ ರೈತರಿಂದ ನೇರವಾಗಿ ಖರೀದಿಸಬೇಕು ಎಂದು ತುಂಗಭದ್ರಾ ಎಡದಂಡೆ ಕಾಲುವೆ ರೈತರ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹವಾಮಾನ ವೈಪರೀತ್ಯದಿಂದಾಗಿ ಭತ್ತದ ತೆನೆ ಬಿಡುವುದು ತಡವಾಗಿದೆ. ಈಗ ಕೇವಲ ಶೇ ೩೫ ರಷ್ಟು ಬೆಳೆದಿದ್ದು ಏಪ್ರಿಲï ೨೦ ವರೆಗೆ ನೀರು ಬಿಡದಿದ್ದರೆ ಬೆಳೆ ಒಣಗುತ್ತದೆ. ನೀರಾವರಿ ಸಲಹಾ ಸಮಿತಿಯ ನಿರ್ಧಾರದಂತೆ ಮಾರ್ಚ್ ೨೩ರ ವರೆಗೆ ಕಾಲುವೆಗಳಿಗೆ ನೀರು ಬಿಡಲು ಹಿಂದಿನ ಸಭೆಯಲ್ಲಿ ತೀರ್ಮಾನವಾಗಿತ್ತು. ಸರ್ಕಾರ ರೈತರ ಬೆಳೆಗಳನ್ನು ರಕ್ಷಣೆ ಮಾಡಲು ಏಪ್ರಿಲï ವರೆಗೆ ನೀರು ಹರಿಸಕು ತುರ್ತು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ರಾಯಚೂರು ಸೇರಿ ಕಲ್ಯಾಣ ಕರ್ನಾಟಕದ ೭ ಜಿ¯್ಲೆಗಳಲ್ಲಿ ಕೆಂಪು ಒಣ ಮೆಣಸಿನಕಾಯಿ ಬೆಳೆದಿದ್ದು ಬೆಲೆ ಕುಸಿತದಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿz್ದÁರೆ. ಕೋಲ್ಡï ಸ್ಟೋರೆಜï ನಲ್ಲಿ ದೊಡ್ಡ ಪ್ರಮಾಣದಲ್ಲಿ ರೈತರು ಸಂಗ್ರಹಿಸಿz್ದÁರೆ. ಬೆಳೆಗೆ ಸಾಕಷ್ಟು ಸಾಲ ಮಾಡಿದ್ದು, ಸಾಲ ತೀರಿಸಲು ಆಗುತ್ತಿಲ್ಲ. ಸಾಲ ನೀಡಿದ ಸಂಸ್ಥೆಗಳು ಸಾಲದ ಮರು ಪಾವತಿಗೆ ನೋಟಿಸï ನೀಡುತ್ತಿz್ದÁರೆ.

ಪ್ರತಿ ಎಕರೆಗೆ ೧.೫೦ ಲಕ್ಷ ರೂಪಾಯಿ ಖರ್ಚಾಗಿದೆ. ಸರ್ಕಾರ ರೈತರ ಸಮಸ್ಯೆ ನಿವಾರಣೆಗೆ ಸರ್ಕಾರ ರೈತರಿಂದ ನೇರವಾಗಿ ಕ್ವಿಂಟಾಲï ಗೆ ೧೩,೦೦೦ ದರದಲ್ಲಿ ಒಣ ಮೆಣಸಿನಕಾಯಿ ಖರೀದಿಸಬೇಕು. ಸರ್ಕಾರ ರೈತರ ನೆರವಿಗೆ ಬಾರದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಚಾಮರಸ ಮಾಲೀ ಪಾಟೀಲ, ಮಾಜಿ ಶಾಸಕ ಗಂಗಾಧರ ನಾಯಕ, ನಾಗನಗೌಡ ಹರವಿ, ಶರಣಪ್ಪ ಗೌಡ ಜÁಡಲದಿನ್ನಿ ಇದ್ದರು.