ಲೋಕಾಪುರ: ಕ್ಷಯರೋಗ ಒಂದು ಸಾಂಕ್ರಾಮಿಕ ರೋಗವಾಗಿದ್ದು. ಇದು ರೋಗಿಗಳಲ್ಲಿ ದೀರ್ಘಕಾಲದವರೆಗೆ ಉಳಿಯುವ ಕಾಯಿಲೆಯಾಗಿದೆ. ಸೂಕ್ತ ಚಿಕಿತ್ಸೆ ನೀಡಿದರೆ ಕ್ಷಯರೋಗ ಮುಕ್ತ ಭಾರತ ನಿರ್ಮಿಸಲು ಸಾಧ್ಯ ಎಂದು ಡಾ. ಮನೋಜಕುಮಾರ ಬಾಡಗಿ ತಿಳಿಸಿದರು.
ಸಮೀಪದ ನಾಗಣಾಪೂರ ಗ್ರಾಮದಲ್ಲಿ ಲೈಮಸ್ಟೋನ್ ಗಣಿ ಮಾಲೀಕರ ವತಿಯಿಂದ ಕ್ಷಯರೋಗ ನಿರ್ಮೂಲನಾ ಅಭಿಯಾನ ಮತ್ತು ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಶಿಬಿರದಲ್ಲಿ 100ಕ್ಕೂ ಅಧಿಕ ಜನರ ರಕ್ತ ತಪಾಸಣೆ ಹಾಗೂ ಆರೋಗ್ಯ ತಪಾಸಣೆ ಮಾಡಲಾಯಿತು. ನಂತರ ಮಧುರ ಲೋಕ ಹವ್ಯಾಸಿ ಗಾಯಕರ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಗಣಿ ಮಾಲಿಕರ ಸಂಘದ ಅಧ್ಯಕ್ಷ ಎಸ್.ಎನ್. ಹಿರೇಮಠ, ಡಾ. ಅಣ್ಣಯ್ಯ ಹೂಗಾರ, ಎಚ್.ಜಿ. ಶ್ರೀಪಾದ, ರಾಮಣ್ಣ ಜುಮನಾಳ, ಅಶೋಕ ಅನಗಳ, ಸುರೇಶ ದೊಡ್ಡನಿಂಗಪ್ಪನವರ ಮತ್ತಿತರರಿದ್ದರು.