ಜಿಲ್ಲೆ

ಸುಂದರ-ಸದೃಢ ದೇಶ ನಿರ್ವಿುಸೋಣ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ನಮಗೆಲ್ಲ ಅವಕಾಶ ಸಿಕ್ಕಿರಲಿಲ್ಲ. ಸ್ವಚ್ಛ-ಸುಂದರ-ಸದೃಢ ಭಾರತ ನಿರ್ವಿುಸುವ ಅವಕಾಶ ಸಿಕ್ಕಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಪಾತ್ರ ನಿರ್ವಹಿಸಬೇಕಾಗಿದೆ ಎಂದು ಹು-ಧಾ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಹೇಳಿದರು.

ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಮಹಾನಗರ ಪಾಲಿಕೆಯ ಹುಬ್ಬಳ್ಳಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಚ್ಛ-ಸುಂದರ ನಗರದಿಂದ ಸ್ವಚ್ಛ-ಸುಂದರ ರಾಜ್ಯ ನಿರ್ವಣವಾಗುತ್ತದೆ. ಜತೆ ಜತೆಗೆ ಸದೃಢ ದೇಶ ಕಟ್ಟಲು ನಾವೆಲ್ಲ ಕೊಡುಗೆ ನೀಡಬೇಕಿದೆ. ಸ್ವಾತಂತ್ರ್ಯ ಸಂಗ್ರಾಮದ ಶೌರ್ಯ ಕಥನಗಳನ್ನು ಮಕ್ಕಳಿಗೆ ತಪ್ಪದೇ ತಿಳಿಸಿ ಹೇಳಬೇಕಾಗಿದೆ ಎಂದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ, ಸದಸ್ಯರಾದ ನಿರಂಜನಯ್ಯ ಹಿರೇಮಠ, ಶೀಲಾ ಕಾಟ್ಕರ, ಪೂಜಾ ಶೇಜವಾಡಕರ, ಚಂದ್ರಿಕಾ ಮೇಸ್ತ್ರಿ, ಇತರರು ಇದ್ದರು.