ಸಿರಿಗೇರಿ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಮೂರು ತಿಂಗಳಿಂದ ಆಯೋಜಿಸಿದ್ದ ಉಚಿತ ಟ್ಯೂಷನ್ ತರಗತಿಗಳ ಸಮಾರೋಪ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ತಾಲೂಕು ಯೋಜನಾಧಿಕಾರಿ ಸುಧೀರ್ ಹಂಗಳಶೂರು ಉದ್ಘಾಟಿಸಿದರು. ಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ ವೀರೇಶ, ವಲಯ ಮೇಲ್ವಿಚಾರಕ ಹನುಮಂತಪ್ಪ, ಸೇವಾಪ್ರತಿನಿಧಿ ಪಾರ್ವತಿ, ಶಿಕ್ಷಕರಾದ ಮಹಾಬಳೇಶ್ ಇತರರಿದ್ದರು. 
ಜಿಲ್ಲೆ

ಕಾರ್ಯಾಗಾರದ ಪ್ರಯೋಜನ ಪಡೆಯಲಿ

ರುದ್ರಪ್ಪ ವಾಲಿ

ಸಿರಿಗೇರಿ: ಜೀವನ ರೂಪಿಸಿಕೊಳ್ಳುವಲ್ಲಿ 10ನೇ ತರಗತಿ ಬಹುಮುಖ್ಯವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ತಾಲೂಕು ಯೋಜನಾಧಿಕಾರಿ ಸುಧೀರ್ ಹಂಗಳಶೂರು ಹೇಳಿದರು.

ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಮೂರು ತಿಂಗಳಿಂದ ಆಯೋಜಿಸಿದ್ದ ಉಚಿತ ಟ್ಯೂಷನ್ ತರಗತಿಗಳ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಲು ಸಹಕಾರಿಯಾಗುವಂತೆ ನುರಿತ ಶಿಕ್ಷಕರಿಂದ ಕಠಿಣ ಎನಿಸುವ ವಿಷಯಗಳ ಕುರಿತು ಟ್ಯೂಷನ್ ಕ್ಲಾಸ್‌ನಲ್ಲಿ ತಿಳಿಸಿಕೊಡಲಾಗಿದೆ.

ಈ ಕಾರ್ಯಾಗಾರದ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದು ಉತ್ತಮ ಲಿತಾಂಶ ತರುವಂತೆ ಮನವಿ ಮಾಡಿದರು. ಮುಖ್ಯ ಶಿಕ್ಷಕ ಪಂಪಾಪತಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಮತ್ತು ಗ್ರಾಮ, ಹೋಬಳಿ ಘಟಕದಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಹಕಾರಿಯಾಗಬಲ್ಲ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.