ಶಿಗ್ಗಾಂವಿ: ಕನ್ನಡ ಉಳಿಸಿ, ಬೆಳೆಸಲು ನಾವಿಂದು ದೃಢ ಸಂಕಲ್ಪ ಮಾಡಿದರೆ ಮಾತ್ರ ರಾಜ್ಯೋತ್ಸವ ಆಚರಣೆ ಸಾರ್ಥಕತೆ ಪಡೆಯುತ್ತದೆ ಎಂದು ಕರವೇ ಗಜಪಡೆ ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠೆ ಹೇಳಿದರು.
ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ತಾಲೂಕಿನ ತಡಸ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗಜಪಡೆ ಸಂಘಟನೆ ವತಿಯಿಂದ ಭಾನುವಾರ ಆಯೋಜಿಸಿದ್ದ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆ, ಅಂಕಿ-ಸಂಖ್ಯೆಗಳು ಇಂದು ಅವಸಾನದ ಅಂಚಿನಲ್ಲಿವೆ. ಇಂದಿನ ಮಕ್ಕಳಿಗೆ ಕನ್ನಡ ಅಂಕಿಗಳನ್ನು ಕಲಿಸಬೇಕು. ಸರ್ಕಾರವು ಕನ್ನಡ ಅಂಕಿ-ಸಂಖ್ಯೆಗಳ ಬಳಕೆಗೆ ಕಡ್ಡಾಯ ಕಾನೂನು ತರಬೇಕು ಎಂದರು.
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.
ಕರವೇ ಗಜಪಡೆ ತಾಲೂಕು ಅಧ್ಯಕ್ಷ ಶಂಕರ ಬಡಿಗೇರ, ನಾರಾಯಣ ಬಡಿಗೇರ, ಶಿಂದಯ್ಯ ಹಿರೇಮಠ, ಬ್ರಹ್ಮಾನಂದ ಕಮ್ಮಾರ, ನಾರಾಯಣ ಬಡಿಗೇರ, ಅದ್ದುಸಾಬ್ ಕೊಲ್ಲಾಪುರ, ಮಹಾವೀರ ಹಳ್ಳಿಯವರ, ಈರಣ್ಣ ಭೋಸ್ಲೆ, ವಿನಾಯಕ ರೇವಣಕರ, ರಾಮಣ್ಣ ಕಮ್ಮಾರ, ಮೌಲಾಲಿ ಹುಚ್ಚುಸಾಬನವರ, ಮಮಸಾಬ್ ಇಟಗಿ, ಮಹ್ಮದಗೌಸ್ ಅಣಿಗೇರಿ, ಶ್ರೀಧರ ಬಡಿಗೇರ, ಇತರರಿದ್ದರು.