ರಟ್ಟಿಹಳ್ಳಿ: ಗಿಡ ಮರಗಳನ್ನು ಪೋಷಣೆ ಮಾಡಿದರೆ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ ಎಂದು ಸಿಪಿಐ ಬಸವರಾಜ ಪಿ.ಎಸ್. ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಖಾಲಿ ನಿವೇಶನದಲ್ಲಿ ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜ್, ತಾ.ಪಂ. ಮತ್ತು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಪರಿಸರ ದಿನಾಚರಣೆ ಆಂಗವಾಗಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆ ಅಥವಾ ಕಾಳಜಿ ಕೇವಲ ಜೂನ್ ತಿಂಗಳಿಗೆ ಸೀಮಿತವಾಗಬಾರದು. ಪ್ರತಿನಿತ್ಯ ಪರಿಸರದ ಸಂರಕ್ಷಣೆ ಮತ್ತು ಕಾಳಜಿ ಇರಬೇಕಾಗುತ್ತದೆ. ಜೂನ್ನಲ್ಲಿ ಮಳೆಗಾಲ ಪ್ರಾರಂಭವಾಗುವುದರಿಂದ ಸಸಿಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ಪಿಎಸ್ಐಗಳಾದ ರಮೇಶ ಪಿ.ಎಸ್.ಮತ್ತು ಕೃಷ್ಣಪ್ಪ ತೋಪಿನ ಮಾತನಾಡಿದರು. ತಾ.ಪಂ. ಇಒ ಲಕ್ಷ್ಮೀಕಾಂತ ಬೊಮ್ಮಣ್ಣನವರ, ಪ್ರಾಚಾರ್ಯ ಗುಡ್ಡಚಾರಿ ಕಮ್ಮಾರ, ಎಎಸ್ಐ ಅಶೊಂಕ ಕೊಂಡ್ಲಿ, ಗುತ್ತಿಗೆದಾರರು ನಾಗನಗೌಡ ಕೋಣ್ತಿ, ರಾಮಣ್ಣ ದೇವಕ್ಕಳವರ, ಮೃತ್ಯುಂಜಯ ಬೆಣ್ಣಿ, ಫಕೀರೇಶ ತುಮ್ಮಿನಕಟ್ಟಿ, ರಿಜ್ವಾನ ಕಪ್ಪನಹಳ್ಳಿ, ವರದಿಗಾರರದ ಸತೀಶ ಸರಶೆಟ್ಟರ್, ಶಿವುಕುಮಾರ ನಾಯಕ ಇತರರು ಇದ್ದರು.