ತಾಳಿಕೋಟೆ: ತಾಳಿಕೋಟೆ ಐತಿಹಾಸಿಕ ನಗರಿ ತಾಲೂಕು ಕೇಂದ್ರವಾದ ಬಳಿಕ ಮೊದಲನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅತ್ಯಂತ ಖುಷಿ ತರುವಂತಹದ್ದಾಗಿದೆ. ಕನ್ನಡಾಂಭೆಯ ತೇರನ್ನು ಎಲ್ಲರೂ ಒಗ್ಗಟ್ಟಿನಿಂದ ಎಳೆಯಬೇಕಾಗಿದೆ ಎಂದು ತಹಸೀಲ್ದಾರ ಕೀರ್ತಿ ಚಾಲಕ್ ಹೇಳಿದರು.
ಪಟ್ಟಣದಲ್ಲಿ ಅ. 1 ರಂದು ಜರುಗಲಿರುವ ತಾಳಿಕೋಟೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿ, ಕನ್ನಡ ಭಾಷೆಯನ್ನು ಹೊತ್ತುಕೊಂಡು ಮೇರೆಸುವಂತಹ ಸಂದರ್ಭ ಬಂದಿದೆ. ನಾಡಿನ ನೆಲ, ಜಲ, ಭಾಷೆಯನ್ನು ಉಳಿಸಿ, ಬೆಳೆಸುವುದರೊಂದಿಗೆ ಅದನ್ನು ರಸುವಂತಹ ಜವಾಬ್ದಾರಿಯೂ ಕೂಡಾ ಪ್ರತಿಯೊಬ್ಬರ ಮೇಲಿದೆ ಎಂದರು.
ತಾಳಿಕೋಟೆ ತಾಲೂಕಿನ ಸಾಹಿತಿಗಳು ರಾಜ್ಯ ಅಲ್ಲದೇ ದೇಶಮಟ್ಟದಲ್ಲಿಯೂ ಹೆಸರು ಮಾಡಿದಂತಹ ಅನೇಕರಿದ್ದಾರೆ. ಆದರೆ ಅವರಿಗೆ ವೇದಿಕೆ ನೀಡುವಂತಹ ಕಾರ್ಯವಾಗುವುದರ ಜೊತೆಗೆ ಪ್ರೋತ್ಸಾಹಿಸುವಂತಹ ಕಾರ್ಯ ಈ ಸಮ್ಮೇಳನದಲ್ಲಿ ನಡೆಯಬೇಕಾಗಿದೆ ಎಂದು ಹೇಳಿದರು.
ತಾಲೂಕಿನ ಎಲ್ಲ ಇಲಾಖೆಗಳು ಈ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಎಲ್ಲ ರೀತಿಯಿಂದ ಸಹಕರಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯರಾಗಿರುವ ಆರ್.ಎಲ್. ಕೊಪ್ಪದ ಅವರೂ ಕೂಡಾ ಕನ್ನಡ ಭಾಷಾಭಿಮಾನದ ಪ್ರತಿಕವಾಗಿದ್ದಾರೆಂದರೆ ತಪ್ಪಾಗಲಾರದು. ಕನ್ನಡದ ತಾಯಿ ಭುವನೇಶ್ವರಿ ದೇವಿಯ ತೇರನ್ನು ಎಲ್ಲರನ್ನೂ ಒಗ್ಗೂಡಿಸಿಕೊಂಡು ಎಳೆಯಲು ಸಜ್ಜಾಗಿರುವುದು ಸಂತಸ ತಂದಿದೆ ಎಂದರು.
ಕಸಾಪ ತಾಲೂಕು ಅಧ್ಯ ಆರ್.ಎಲ್. ಕೊಪ್ಪದ, ಸಾಹಿತಿಗಳಾದ ಗುರುಪಾದ ಘೀವಾರಿ, ಶ್ರೀಕಾಂತ್ ಪತ್ತಾರ, ಕಲಾವಿದ ಹುಸೇನ ಮಕಾನದಾರ, ಸಿಆರ್ಸಿ ರಾಜು ವಿಜಾಪುರ, ಸಂಟನಾ ಸಂಚಾಲಕ ಜೆ ಭೀಮ್ ಮುತ್ತಗಿ, ರಾಜು ಹಂಚಾಟೆ, ಸಂಗನಗೌಡ ಅಸ್ಕಿ, ಪ್ರಾಥಮಿಕ ಶಾಲಾ ಶಿಕರ ಸಂದ ಅಧ್ಯ ಬಿ.ಟಿ. ವಜ್ಜಲ್, ಡಾ. ಅನೀಲ ಕುಮಾರ ಇರಾಜ, ಆರ್.ಬಿ.ದಾನಿ, ಶಾಲಾ ಶಿಕರ ಸಂದ ಗೌರವ ಕಾರ್ಯದರ್ಶಿ ಸುರೇಶ ಬೀರಗೊಂಡ, ಆರ್ಿ ಹೊನ್ನುಟಗಿ, ಎಸ್.ವ್ಹಿ. ಜಾಮಗೊಂಡಿ. ಬಸವರಾಜ ಕಟ್ಟಿಮನಿ, ರವಿ ಕಟ್ಟಿಮನಿ, ಶಿಕ ಗುಂಡುರಾವ್ ಧನಪಾಲ, ಸಿದ್ದು ಕಟ್ಟಿಮನಿ, ರೇಣುಕಾ ಕಲ್ಬುರ್ಗಿ, ಮಡಿವಾಳಮ್ಮ ನಾಡಗೌಡ, ಮುನ್ನಾ ಅತ್ತಾರ, ಪ್ರಭು ಸಣ್ಣಕ್ಕಿ, ಪರಿಷತ್ತಿನ ಮಹಿಳಾ ಪದಾಧಿಕಾರಿಗಳು ಹಾಗೂ ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.