ಹಗರಿಬೊಮ್ಮನಹಳ್ಳಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿ ವಕೀಲ ಪ್ರಹ್ಲಾದ್ ಕಾಗೆ, ವಿದ್ಯಾಕೇಂದ್ರದ ಕಾರ್ಯದರ್ಶಿ ಬಸನಗೌಡ ಇತರರಿದ್ದರು. 
ಜಿಲ್ಲೆ

ಎಲ್ಲರೂ ಸಿದ್ದಿ ಪಡೆಯೋಣಾ

ಗಾಯತ್ರಿ ಮಾಲಿಪಾಟೀಲ್

ಹಗರಿಬೊಮ್ಮನಹಳ್ಳಿ: ಯೋಗಾಭ್ಯಾಸದಿಂದ ಸ್ಮರಣ ಶಕ್ತಿ ಹೆಚ್ಚಾಗಿಲಿದೆ ಎಂದು ವಕೀಲ ಪ್ರಹ್ಲಾದ್ ಕಾಗೆ ಹೇಳಿದರು.

ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯೋಗದ ಅಧ್ಯಯನಕ್ಕಾಗಿ ವಿದೇಶದಿಂದ ವಿದ್ವಾಂಸರು ಭಾರತಕ್ಕೆ ಬರುತ್ತಿದ್ದಾರೆ. ಆದರೆ, ಭಾರತೀಯರು ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಪಾಶ್ಚತ್ಯ ಸಂಸ್ಕೃತಿಗೆ ಮರುಳಾಗಿದ್ದೇವೆ. ಇಂದು ಪ್ರಪಂಚದ 165ಕ್ಕೂ ಹೆಚ್ಚು ದೇಶಗಳು ಯೋಗವನ್ನು ಅವಳವಡಿಸಿಕೊಂಡಿವೆ. ಎಲ್ಲರೂ ಯೋಗದಿಂದ ಸಿದ್ಧಿ ಪಡೆಯೋಣ ಎಂದರು.

ವಿದ್ಯಾಕೇಂದ್ರದ ಕಾರ್ಯದರ್ಶಿ ಬಸನಗೌಡ ಮಾತನಾಡಿ, ಶರೀರ ಮತ್ತು ಮನಸ್ಸನ್ನು ನಿಗ್ರಹಿಸಿದರೆ ಏಕಾಗ್ರತೆ ವೃದ್ಧಿಸುತ್ತದೆ ಎಂದರು.

ಮುಖ್ಯಶಿಕ್ಷಕ ರಂಗನಾಥ, ಸಹ ಕಾರ್ಯದರ್ಶಿ ಹಾಗೂ ಯೋಗತರಬೇತುದಾರ ದುರ್ಗಣ್ಣ, ಶಿಕ್ಷಕರಾದ ಪ್ರಭುಗೌಡ, ವೀರೇಶ ವಾಲಿ, ಹಳ್ಳಿ ನಾಗರಾಜ, ಆಚ್ಯುತ್, ಅಂಕಿತಾ, ಶಿವಶಂಕ್ರಯ್ಯ, ಮಧುಕರ್, ಕೆ.ನಾಗರಾಜ, ಅಶೋಕ, ಪ್ರಮುಖರಾದ ನಾರಾಯಣ ಕೆರೂರ್, ವಿಜಯಕುಮಾರ್, ಮಂಜುನಾಥ ಇತರರಿದ್ದರು.