ಜಿಲ್ಲೆ

ಗಾಂಧೀಜಿ ಆದರ್ಶಗಳನ್ನು ಅಳವಡಿಸಿಕೊಳ್ಳೋಣ, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸುಭಾಸ ಚವ್ಹಾಣ ಸಲಹೆ

ಶಿಗ್ಗಾಂವಿ: ವರ್ಷಕ್ಕೊಮ್ಮೆ ಗಾಂಧೀಜಿಯನ್ನು ನೆನಪಿಸಿಕೊಂಡರೆ ಸಾಲದು, ಬದಲಿಗೆ ಅವರ ಗುಣಗಳನ್ನು ಅಳವಡಿಸಿಕೊಂಡು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸುಭಾಸ ಚವ್ಹಾಣ ಹೇಳಿದರು.


ಶಿಗ್ಗಾಂವಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಬುಧವಾರ ಮಹಾತ್ಮ ಗಾಂಧೀಜಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಶಿಗ್ಗಾಂವಿ ತಾಲೂಕು ಭಾಜಪ ಮಂಡಲ, ಎಸ್​ಡಿಎಂ ನಾರಾಯಣ ಹಾರ್ಟ್ ಸೆಂಟರ್ ಧಾರವಾಡ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಹೃದಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.


ಎಸ್​ಡಿಎಂ ನಾರಾಯಣ ಹಾರ್ಟ್ ಸೆಂಟರ್ ತಜ್ಞ ವೈದ್ಯೆ ಡಾ. ಲತಾ ಕರ್ಬಿ ಅವರ ತಂಡ ಆರೋಗ್ಯ ತಪಾಸಣೆ ನಡೆಸಿತು. ಶಿವಯೋಗಿಸ್ವಾಮಿ ಹಿರೇಮಠ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಮಂಡಲದ ಅಧ್ಯಕ್ಷ ವಿಶ್ವನಾಥ ಹರವಿ ಅಧ್ಯಕ್ಷತೆ ವಹಿಸಿದ್ದರು. ರೇಣಕನಗೌಡ ಪಾಟೀಲ, ಸೋಮಶೇಖರಯ್ಯ ಗೌರಿಮಠ, ಶಿವು ಮುದ್ದಪ್ಪನವರ, ಶಂಭಣ್ಣ ಕಡಕೋಳ, ನಾಗಪ್ಪ ಕಡಕೋಳ, ಶೇಖಣ್ಣ ಮರೆಮ್ಮನವರ, ಮಳಪ್ಪ ಜಾಡರ, ರಾಜಶೇಖರ ಬಡ್ಡಿ, ಜಯಪ್ಪ ಜಾಡರ, ಷಣ್ಮುಖಗೌಡ ಪಾಟೀಲ, ರಮೇಶ ಆಲದಕಟ್ಟಿ, ಮಂಜುನಾಥ ರೆಡ್ಡಿ, ಹಾಗೂ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸೇರಿ, ಇತರರಿದ್ದರು.