ಜಿಲ್ಲೆ

ಗಾಂಧಿ ತತ್ವ, ಶಾಸ್ತ್ರಿ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳೋಣ

ಹೆಬ್ರಿ: ಸತ್ಯ ಮತ್ತು ಅಹಿಂಸೆಯ ದೀಪವನ್ನು ಬೆಳಗಿಸಿದ ಮಹಾನ್ ಶಕ್ತಿ ಮಹಾತ್ಮ ಗಾಂಧಿ. ಭಾರತ ಸ್ವಾತಂತ್ರ್ಯ ಪಡೆಯಲು ಅವರು ಅನುಸರಿಸಿದ ಸತ್ಯಾಗ್ರಹ ಹಾಗೂ ಅಸಹಕಾರ ಚಳುವಳಿ ಜಗತ್ತಿನ ಇತರ ದೇಶಗಳಿಗೂ ವಾದರಿಯಾಗಿದೆ. ಲಾಲ್ ಬಹದ್ದೂರ್ ಶಾಸಿ ದೇಶದ ಉತ್ತಮ ಆಡಳಿತಗಾರರಾಗಿ, ದೇಶದ ಪ್ರಧಾನಮಂತ್ರಿಯಾಗಿ ದೇಶಸೇವೆಯಲ್ಲೇ ತೊಡಗಿಸಿಕೊಂಡ ಮಹಾನ್ ನಾಯಕ. ಗಾಂಧಿ ತತ್ವ, ಶಾಸಿ ಆದರ್ಶವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸಬೇಕು ಎಂದು ಮುದ್ರಾಡಿ ಎಂಎನ್‌ಡಿಎಸ್‌ಎಂ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಹೇಳಿದರು.

ಮುದ್ರಾಡಿ ಎಂಎನ್‌ಡಿಎಸ್‌ಎಂ ಪ್ರೌಢಶಾಲೆಯಲ್ಲಿ ನಡೆದ ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಲ್ಲಿ ಮಾತನಾಡಿದರು.

ಶಿಕ್ಷಕರಾದ ಮಹೇಶ್ ನಾಯ್ಕ, ಶ್ಯಾಮಲಾ, ರುಪತಿ ಹೆಬ್ಬಾರ್ ಹಾಗೂ ಮಹೇಶ್ ಕಾನ್ಗುಂಡಿ, ರುನಂದನ್, ವಿದ್ಯಾರ್ಥಿ ನಾಯಕ ಕಾರ್ತಿಕ್, ಉಪನಾಯಕ ಪ್ರತೀಕ್, ತರಗತಿ ಪ್ರತಿನಿಧಿಗಳಾದ ಮಣಿಕಂಠ, ಯಕ್ಷಿತ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಸ್ನೇಹಾ ಸ್ವಾಗತಿಸಿ, ಲಾವಣ್ಯ ವಂದಿಸಿದರು.