ಚೌಳಹಿರಿಯೂರು: ಕ್ರೀಡಾಪಟುಗಳ ಗುರಿ ನಿಮ್ಮ ಗೆಲುವಿನ ಕಡೆ ಇರಬೇಕು. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರು ನೀಡಿದ ತರಬೇತಿ ದೃಢಪಡಿಸುವುದೇ ಕ್ರೀಡಾಕೂಟ ಎಂದು ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೃಷ್ಣಮೂರ್ತಿ ಹೇಳಿದರು.
ಸ್ಥಳಿಯ ಕೆಪಿಎಸ್ ಶಾಲೆ ಕ್ರೀಡಾಂಗಣದಲ್ಲಿ ಡಾ.ಅಂಬೇಡ್ಕರ್ ವಸತಿ ಶಾಲೆ ಆಶ್ರಯದಲ್ಲಿ ಆಯೋಜಿಸಿದ್ದ ವಲಯ ಮಟ್ಟದ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವಿಶಾಲವಾದ ಕ್ರೀಡಾಂಗಣವಿದೆ. ಜಿಲ್ಲೆಯ ಗಡಿ ಗ್ರಾಮದ ಅಭಿವೃದ್ಧಿಗೆ ಶಾಸಕರಿಂದ ಅನುದಾನ ತರುವ ಪ್ರಯತ್ನ ಮುಂದುವರಿದಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಸುಧಾ ದೇವರಾಜ್ ಮಾತನಾಡಿ, ಮನುಷ್ಯನ ಸದಡತೆಗೆ ಕ್ರೀಡೆ ಅತ್ಯವಶ್ಯಕ ಕ್ರೀಡಾಪಟುಗಳು ಸೋಲು ಗೆಲುವನ್ನು ಸಮರ್ಪಕವಾಗಿ ಸ್ವೀಕರಿಸಬೇಕು ಎಂದರು.
ಗ್ರಾಪಂ ಉಪಾಧ್ಯಕ್ಷ ಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷ ಗಾಡಿ ಯತಿಶ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ್, ದೈಹಿಕ ಶಿಕ್ಷಕ ಪರಿವಿಕ್ಷಕ ನಾಗರಾಜ್, ಡಾ.ಅಂಬೆಡ್ಕರ್ ಶಾಲೆ ಪ್ರಾಚಾರ್ಯ ಧನರಾಜ್, ಗ್ರಾಪಂ ಮಾಜಿ ಅಧ್ಯಕ್ಷ ಶಿವಶಂಕರ್, ಅಶೋಕ್, ಲತಾಮಣಿ, ಬುದಾಳ್ ಜಯಣ್ಣ, ದೀಪಾ, ಅನಿತಾ, ಪಾಂಡುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.