ಜಿಲ್ಲೆ

ಯತ್ನಾಳ ಮಾತುಗಳಿಗೆ ಲಗಾಮು ಹಾಕಿಕೊಳ್ಳಲಿ

ಚನ್ನಮ್ಮನ ಕಿತ್ತೂರು : ಬಸವ ತತ್ತ$್ವಗಳ ಪ್ರಸಾರಕ ಬೆಲೂರಿನ ನಿಜಗುಣಾನಂದ ಸ್ವಾಮೀಜಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಡೆಯನ್ನು ಸ್ಥಳಿಯದ ಟಕದ ರಾಷ್ಟ್ರೀಯ ಬಸವದಳ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.

ಸಮೀಪದ ಎತ್ತಿನಕೇರಿ ಗ್ರಾಮದ ಬಸವ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ತಾಲೂಕು ರಾಷ್ಟ್ರೀಯ ಬಸವದಳದ ಅಧ್ಯ ಮಹೇಶ ಪೂಜೇರ ಮಾತನಾಡಿ, ನಿಜಗುಣಾನಂದ ಸ್ವಾಮೀಜಿ ಲಿಂಗಾಯತ ಧರ್ಮಪ್ರಸಾರಕರಾಗಿದ್ದು, ಅದಕ್ಕಾಗಿಯೇ ಜೀವನ ಸವೆಸಿದ್ದಾರೆ. ಅಂಥವರ ವಿರುದ್ಧ ಯತ್ನಾಳ ಅವಹೇಳನಕಾರಿಯಾಗಿ ಮಾತನಾಡಿರುವುದು ಬೇಸರದ ಸಂಗತಿ. ಅದಲ್ಲದೆ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪನೆ ಮಾಡಿಲ್ಲ ಎಂಬ ಯತ್ನಾಳ ಹೇಳಿಕೆ ನಿರಾಧಾರ. ಲಿಂಗಾಯತ ಸ್ವತಂತ್ರ ಧರ್ಮ ಎಂಬುದಕ್ಕೆ ಸಾಕಷ್ಟು ಸಾಾಧಾರಗಳಿದ್ದು, ಅವರು ಅರಿಯಬೇಕು. ಇನ್ನು ಮುಂದಾದರೂ ಅವರು ಮಾತುಗಳಿಗೆ ಲಗಾಮು ಹಾಕಬೇಕು. ಇಲ್ಲದಿದ್ದರೆ ಅವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಾಲೂಕು ಪಂಚಮಸಾಲಿ ಮಹಾಸಭಾ ಅಧ್ಯ ಡಿ.ಆರ್​.ಪಾಟೀಲ , ಚಂದ್ರಗೌಡ ಪಾಟೀಲ, ರಾಜಶೇಖರ ಕೋಟಿ, ಬಸವರಾಜ ಸುಂಕದ ಮಾತನಾಡಿದರು. ರಾಚಪ್ಪ ಸಂಗೊಳ್ಳಿ, ಮಡಿವಾಳಪ್ಪ ಕೋರಿಶೆಟ್ಟರ, ರಾಯಪ್ಪ ಹಣಜಿ, ಬಾಳಪ್ಪ ಶಿವಲಿಂಗನವರ, ಬಸವರಾಜ ಅಮಟೂರ, ದುಂಡಪ್ಪ ಹಣಜಿ, ಕೇಶಪ್ಪ ಶಿವಲಿಂಗನವರ ಇತರರಿದ್ದರು.