ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಲಿಂಗತ್ವ ಸೂಕ್ಷ್ಮತೆ ತರಬೇತಿ ಕಾರ್ಯಾಗಾರವನ್ನು ಸಮಾಜಶಾಸ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಪ್ರೊ.ವಿಜಯಾ ಕೋರಿಶೆಟ್ಟಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಪ್ರೊ.ಲಕ್ಷ್ಮ್ಮಿದೇವಿ, ಡಾ.ಲತಾ.ಪಿ.ಎಂ, ಪ್ರೊ.ಡಿ.ಎಂ.ಮದರಿ ಇದ್ದಾರೆ.  
ಜಿಲ್ಲೆ

ಮಹಿಳೆಯರಿಗೂ ಸಮಾನ ಅವಕಾಶ ಸಿಗಲಿ: ಪ್ರೊ.ವಿಜಯಾ ಕೋರಿಶೆಟ್ಟಿ

Bellari - Heera Nayak

ವಿಜಯಪುರ : ಮಹಿಳೆ ಮತ್ತು ಪುರುಷ ಇಬ್ಬರೂ ಒಂದು ಚಕ್ಕಡಿಯ ಎರಡು ಚಕ್ರಗಳಿದ್ದಂತೆ. ಅವರಿಬ್ಬರೂ ಚನ್ನಾಗಿದ್ದರೆ ಮಾತ್ರ ಕುಟುಂಬ, ಸಮಾಜ ಮತ್ತು ದೇಶ ಚನ್ನಾಗಿರುತ್ತದೆ ಎಂಬ ಅಂಶವನ್ನು ಅರಿತು ಬಾಳಬೇಕು ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಮಾಜಶಾಸ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.

ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಬೋಧಕೇತರ ಸಿಬ್ಬಂದಿಗೆ ಗುರುವಾರ ಹಮ್ಮಿಕೊಂಡಿದ್ದ ಲಿಂಗತ್ವ ಸೂಕ್ಷ್ಮತೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಂದಕ್ಕೂ ಮಹಿಳೆ ಮೊದಲಿಗಳು, ಮಹಿಳೆ ಮತ್ತು ಪುರುಷ ಎಂಬ ತಾರತಮ್ಯ ಬೇಡ.ಪುರುಷನಷ್ಟೇ ಮಹಿಳೆಗೂ ಸಮಾನ ಅವಕಾಶಗಳು ಸಿಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ.ಡಿ.ಎಂ.ಮದರಿ, ನಮ್ಮ ವಿಶ್ವವಿದ್ಯಾಲಯದಲ್ಲಿ ಬಹುತೇಕ ಸಿಬ್ಬಂದಿ ಅವರಲ್ಲಿ ಲಿಂಗ ಸಮಾನತೆ ಇದೆ. ಪುರುಷ ಮತ್ತು ಮಹಿಳೆ ಇಬ್ಬರೂ ಸಮಾನರು, ನಮ್ಮಲ್ಲಿರುವ ಎಷ್ಟೋ ಮಹಿಳೆಯರು ತಮ್ಮ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಕುಟುಂಬದ ಮುಖ್ಯಸ್ಥರಾದ ತಂದೆ ತಾಯಿ ಇಬ್ಬರೂ ಮುಂಬರುವ ಪೀಳಿಗೆಗೆ ಹಾಗೂ ತಮ್ಮ ಮಕ್ಕಳಿಗೆ ಲಿಂಗತ್ವ ಸಮಾನತೆಯ ಬಗ್ಗೆ ಅರಿವನ್ನು ಮೂಡಿಸಬೇಕು ಎಂದು ಹೇಳಿದರು.

ಪುಣೆಯ ಖ್ಯಾತ ಲೇಖಕಿ ಹಾಗೂ ಹೋರಾಟಗಾರ್ತಿ ಡಾ.ಲತಾ.ಪಿ.ಎಂ, ಡಾ. ರಮೇಶ ಸೋನಕಾಂಬಳೆ, ಡಾ.ಎಂ.ಎಸ್. ಮುಜಾವರ ಹಾಗೂ ವಿಶ್ವವಿಶ್ವವಿದ್ಯಾಲಯದ ಹಲವಾರು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.