ಜಿಲ್ಲೆ

ಸ್ತ್ರೀಯರು ಸಬಲೀಕರಣಕ್ಕೆ ಒತ್ತು ನೀಡಲಿ

ಗಜೇಂದ್ರಗಡ: ಮಹಿಳೆಯರು ಕುಟುಂಬದ ಜವಾಬ್ದಾರಿಯೊಂದಿಗೆ ಸಾಮಾಜಿಕ ಹಾಗೂ ರಾಜಕೀಯ ಸಬಲೀಕರಣಕ್ಕೆ ಒತ್ತು ಕೊಡಬೇಕು ಎಂದು ಮೈಸೂರು ಮಠದ ವಿಜಯಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಮೈಸೂರು ಮಠದಲ್ಲಿ ಬಣಜಿಗ ಕ್ಷೇಮಾಭಿವೃದಿಟಛಿ ಸಂಘ ಗಜೇಂದ್ರಗಡ-ಉಣಚಗೇರಿ ಮಹಿಳಾ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿ, ಮಹಿಳಾ ದಿನಾಚರಣೆಯ ಆಶಯಗಳು ಕೇವಲ ಸುಶಿಕ್ಷಿತ ವರ್ಗದ ಮಹಿಳೆಯರಿಗೆ ತಲುಪಿದರೆ ಸಾಲದು. ಸಮಾಜದ ಕಟ್ಟಕಡೆಯ ಮಹಿಳೆಗೂ ಈ ಸಂದೇಶ ತಲುಪಬೇಕು. ಅವರೂ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು.

ವೈದ್ಯೆ ಡಾ. ಪೂರ್ಣಿಮಾ ಬೆಲ್ಲದ ಮಾತನಾಡಿ, ಹಿಂದಿನ ಕಾಲದಲ್ಲಿ ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತವಾಗಿದ್ದಳು. ಈಗ ಅವಳು ಎಲ್ಲ ರಂಗಗಳಲ್ಲಿಯೂ ಸಾಧನೆ ಮಾಡುತ್ತಿದ್ದಾಳೆ ಎಂದರು.

ಬಣಜಿಗ ಸಮಾಜದ ಅಧ್ಯಕ್ಷ ಉಮೇಶ ಮೆಣಸಗಿ, ಡಾ.ಬಿ.ವಿ. ಕಂಬಳ್ಯಾಳ, ಎಸ್.ಎಸ್. ವಾಲಿ, ಬಸವರಾಜ ಶೀಲವಂತರ, ಸುವರ್ಣಾ ನಂದಿಹಾಳ, ಗೀತಾ ಕಂಬಳ್ಯಾಳ, ಸುಕನ್ಯಾ ಹೊಗರಿ, ಶರಣಮ್ಮ ಅಂಗಡಿ, ದಾನಮ್ಮ ಪಟ್ಟೇದ, ಭುವನೇಶ್ವರಿ ಕತ್ತಿಶೆಟ್ಟರ, ಸಹನಾ ಮತ್ತಿಕಟ್ಟಿ, ಗಿರಿಜಜಾ ಬಳಿಗೇರ, ಸುಜಾತಾ ಮೆಣಸಗಿ, ಗೀತಾ ವಾಲಿ, ರಾಜೇಶ್ವರಿ ಅಂಗಡಿ, ನಯನಾ ಮತ್ತಿಕಟ್ಟಿ, ಪುಷ್ಪಾ ಚೋಳಿನ, ನೇತ್ರಾ ಹೊಸಂಗಡಿ, ಶೋಭಾ ಶೀಲವಂತರ, ಸುಮನ ನಂದಿಹಾಳ, ವಿಜಯಲಕ್ಷ್ಮೀ ಚಟ್ಟೇರ, ದೀಪಾ ಕೊಟಗಿ, ಗಂಗಾ ಜೋಳದ, ಗೀತಾ ಶೆಟ್ಟರ, ಜಯಶ್ರೀ ಅಂಗಡಿ, ಕವಿತಾ ಗುಗ್ಗರಿ, ಇತರರಿದ್ದರು.