ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಶೇಷ ಉಪನ್ಯಾಸದಲ್ಲಿ ಪ್ರೊ. ಕೆ. ರಮೇಶ ಮಾತನಾಡಿದರು. ಡಾ. ಜಿ. ಸೌಭಾಗ್ಯ, ಪ್ರೊ. ಸಕ್ಪಾಲ್​ ಹೂವಣ್ಣ ಇದ್ದಾರೆ. 
ಜಿಲ್ಲೆ

ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಮುಂಚೂಣಿಗೆ ಬರಲಿ

ವಿಜಯಪುರ : ವಿಜ್ಞಾನ ೇತ್ರದಲ್ಲಿ ಮಹಿಳೆ ಸಮಾನತೆ ಸಾಧಿಸಲಿ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್​ ಪ್ರೊ. ಕೆ. ರಮೇಶ ಹೇಳಿದರು.

ನಗರ ಹೊರ ವಲಯದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಸ್ಮಾರ್ಟ್​ ಆಪ್ಟಿಕಲ್​ ಮಟೆರಿಯಲ್ಸ್​ ಆ್ಯಂಡ್​ ಆ್ಯಂಗುಲರ್​ ಮೊಮೆಂಟಮ್​ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿತ್ಯಜಿವನದಲ್ಲಿ ವೈಜ್ಞಾನಿಕ ವಿಚಾರಗಳು, ಆಚರಣೆಗಳು ಬಳಕೆಯಲ್ಲಿ ಇರಬೇಕು. ವಿದ್ಯಾರ್ಥಿನಿಯರ ಜೀವನಕ್ರಮವೂ ವೈಜ್ಞಾನಿಕತೆಯಿಂದ ಒಳಗೊಂಡಿರಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ನಿಕಾಯದ ಡೀನ್​ ಪ್ರೊ. ಸಕ್ಪಾಲ್​ ಹೂವಣ್ಣ ಮಾತನಾಡಿದರು. ಅತಿಥಿ ಉಪನ್ಯಾಸಕಿ ವಾಣಿಶ್ರೀ ಕಿರಣಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಯೋಜಕಿ ಡಾ. ಜಿ. ಸೌಭಾಗ್ಯ ಮತ್ತಿತರರರಿದ್ದರು.