ಜಿಲ್ಲೆ

ಮಹಿಳೆಯರು ಆರ್ಥಿಕವಾಗಿ ಸಬಲರಾಗಲಿ

ಸೋಮಲಿಂಗ ತಳವಾರ

ಬೈಲಹೊಂಗಲ: ಜ್ಞಾನ ವಿಕಾಸ ಕೆಂದ್ರಗಳ ಮೂಲಕ ಮಹಿಳೆಯರು ಶೈಣಿಕ, ಆರ್ಥಿಕ, ಸಾಮಾಜಿಕವಾಗಿ ಸ್ವಾವಲಂಬಿಗಳಾಗಲು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಕೇಂದ್ರದ ವಲಯ ಸಮನ್ವಯಾಧಿಕಾರಿ ಶೈಲಾ ಎ. ಹೇಳಿದರು.

ದೊಡವಾಡ ಗ್ರಾಮದ ಶಾಂತಿನಗರದ ಶ್ರೀ ಗ್ರಾಮದೇವತೆ ಜ್ಞಾನ ವಿಕಾಸ ಕೇಂದ್ರದಲ್ಲಿ ಶ್ರೀ ೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಮಹಿಳೆಯರಿಗೆ ಮೂರು ತಿಂಗಳ ಉಚಿತ ಹೊಲಿಗೆ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಹೊಲಿಗೆ ತರಬೇತಿ ಕಾರ್ಯಾಗಾರದಲ್ಲಿ ಸಮಯ ಪಾಲನೆಗೆ ಮಹತ್ವ ನೀಡಿ, ಮಾರ್ಗದರ್ಶನದ ಸದುಪಯೋಗ ಪಡೆಯಬೇಕು ಎಂದರು. ಗ್ರಾಪಂ ಅಧ್ಯೆ ಸಂಗೀತಾ ಚಂದರಗಿ, ಒಕ್ಕೂಟದ ಅಧ್ಯೆ ವಿಜಯಲಕ್ಷಿ$್ಮ ಸಂಗೊಳ್ಳಿ, ಸವಿತಾ ಮೆಣಸಿನಕಾಯಿ, ಸವಿತಾ ಇಂಚಲ ಇತರರಿದ್ದರು. ರತ್ನಾ ಸೋಬಾನದ ನಿರೂಪಿಸಿದರು. ಗಂಗಮ್ಮ ಉಜ್ಜನಿಮಠ ಸ್ವಾಗತಿಸಿದರು. ಅನ್ನಪೂರ್ಣ ಧಾರವಾಡ ವಂದಿಸಿದರು.