ಜಿಲ್ಲೆ

ಮುಖ್ಯವಾಹಿನಿಗೆ ಬರಲಿ ವಿಶ್ವಕರ್ಮ ಸಮಾಜ

ಬಸವರಾಜ ವೀರಪ್ಪ ಗರಗ

ನವಲಗುಂದ: ವೇದ ಪುರಾಣಗಳ ಕಾಲದಿಂದಲೂ ದೇವತೆಗಳ ನಗರಗಳನ್ನು ವಾಸ್ತುಶಿಲ್ಪಿ ವಿನ್ಯಾಸ ಮಾಡಿದ ಹೆಗ್ಗಳಿಕೆ ವಿಶ್ವಕರ್ಮರದು ಎಂದು ಗದಗ ವಿಶ್ವಕರ್ಮ ನೌಕರರ ಸಂಘದ ಅಧ್ಯಕ್ಷ ರಾಜಗೋಪಾಲ ಕಡ್ಲಿಕೊಪ್ಪ ಹೇಳಿದರು.

ಪಟ್ಟಣದ ನೌಕರರ ಕಲ್ಯಾಣ ಕೇಂದ್ರದಲ್ಲಿ ತಾಲೂಕಾಡಳಿತ ಹಾಗೂ ಸಮಾಜ ವತಿಯಿಂದ ಶನಿವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಸೃಷ್ಟಿಕರ್ತರು ಎಂದು ಸಂಬೋಧಿಸುವ ವಿಶ್ವಕರ್ಮ ಸಮಾಜವು ಆರ್ಥಿಕವಾಗಿ ಸಬಲವಾಗಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಕುಶಲಕರ್ವಿುಗಳಿಗಾಗಿ 15 ಸಾವಿರ ಕೋಟಿ ರೂಪಾಯಿ ಯೋಜನೆಯ ವಿಶೇಷ ಪ್ಯಾಕೇಜ್ ಘೊಷಣೆಯ ಸದುಪಯೋಗ ಪಡೆದು ಮುಖ್ಯವಾಹಿನಿಗೆ ಬರಬೇಕು ಎಂದರು.

ಸಾನ್ನಿಧ್ಯ ವಹಿಸಿ ನಾಗಲಿಂಗ ಸ್ವಾಮಿ ಮಠದ ವೀರೇಂದ್ರ ಸ್ವಾಮೀಜಿ ಮಾತನಾಡಿ, ಇತಿಹಾಸದಲ್ಲಿ ಐಹೊಳಿ, ಪಟ್ಟದಕಲ್ಲು, ಬದಾಮಿ, ಅಜಂತಾ ಎಲ್ಲೋರಾಗಳಂತ ವಿಶ್ವ ಪ್ರಸಿದ್ಧ ಕಟ್ಟಡಗಳನ್ನು ನಿರ್ವಿುಸಿದ್ದಾರೆ. ಈಗಿನ ರಾಮಜನ್ಮ ಭೂಮಿ ಅಯೋಧ್ಯೆಯ ವಾಸ್ತುಶಿಲ್ಪ ಮಾಡಿದ ಹೆಮ್ಮೆ ವಿಶ್ವಕರ್ಮರದು ಎಂದರು.

ತಾಲೂಕಾಧ್ಯಕ್ಷ ಗಂಗಪ್ಪ ಕಮ್ಮಾರ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಜಿಲ್ಲಾಧ್ಯಕ್ಷ ಕಾಳಪ್ಪ ಬಡಿಗೇರ, ಮುಖಂಡರಾದ ಎಂ.ಎಸ್. ಮಾನಣ್ಣವರ, ಗುಂಡಪ್ಪ ಖನ್ನೂರ, ಎನ್.ಬಿ. ಬಡಿಗೇರ, ಗಂಗಾಧರ ಬಡಿಗೇರ, ಗಂಗಾಧರ ಪತ್ತಾರ, ಪ್ರಕಾಶ ಸಂಗಳದ, ಜ್ಯೋತಿ ಬಡಿಗೇರ, ಜಿಎಸ್​ಟಿ ಅಧಿಕಾರಿ ರತ್ನಾ ವಿಶ್ವಜ್ಞ, ಡಿ.ಆರ್. ಬಡಿಗೇರ, ಪ್ರಕಾಶ ಬಡಿಗೇರ, ಆನಂದ ಹವಳಕೋಡ, ಇತರರಿದ್ದರು.

ಇದೇ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಐಶ್ವರ್ಯ ಅಷ್ಟೇಕರ ಪ್ರಾರ್ಥಿಸಿದರು. ಭೀಮರಾಯ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಲ್.ಎಚ್. ಕಮ್ಮಾರ ಸ್ವಾಗತಿಸಿದರು. ಪ್ರದೀಪ ಪತ್ತಾರ ವಂದಿಸಿದರು.

ಇದಕ್ಕೂ ಮುನ್ನ ಶೆಟ್ಟರ್ ಕೆರೆಯಿಂದ ವಿಶ್ವಕರ್ಮ ಪ್ರಭುವಿನ ಭಾವಚಿತ್ರ ಮೆರವಣಿಗೆ, ಸುಮಂಗಲೆಯರಿಂದ ಕುಂಭೋತ್ಸವ ನಗರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.