ಜಿಲ್ಲೆ

ಮಹಾತ್ಮರ ಕೆಲಸ ಕಾರ್ಯದಲ್ಲಿ ಒಗ್ಗಟ್ಟಿರಲಿ

ಗುಬ್ಬಿ: ಜಾತಿ, ಮತ ಭೇದ ಭಾವ ಬಿಟ್ಟು ಮಹಾತ್ಮರ ಕೆಲಸ ಕಾರ್ಯಗಳನ್ನು ಮಾಡುವುದಕ್ಕೆ ಗ್ರಾಮದಲ್ಲಿ ಸಂಘಟಿತರಾಗಬೇಕು ಎಂದು ಶ್ರೀ ಬಾಲಗಂಗಾಧರನಾಥ ಒಕ್ಕಲಿಗ ಟ್ರಸ್ಟ್​ ಅಧ್ಯಕ್ಷ ಭಾನುಪ್ರಕಾಶ್​ ತಿಳಿಸಿದರು.

ತಾಲೂಕಿನ ಸಿಎಸ್​ ಪುರ ಗ್ರಾಮ ವೃತ್ತದಲ್ಲಿ ನಿರ್ಮಿಸಿರುವ ಭೈರವೈಕ್ಯ ಪದ್ಮಭೂಷಣ, ಜಗದ್ಗುರು ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪುತ್ಥಳಿ ಅನಾವರಣದ ಮೊದಲನೇ ವಾರ್ಷಿಕೋತ್ಸವದಲ್ಲಿ ಪೂಜೆ ಸಲ್ಲಿಸಿ ಮಾತನಾಡಿ,ಗ್ರಾಮದಲ್ಲಿ ಎಲ್ಲರು ಸಂಘಟಿತರಾಗಿ ವೈಷಮ್ಯ ಬಿಟ್ಟು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಎಲ್ಲಿ ಸಂಘಟಿತ ಮನೋಭಾವ ಇರುತ್ತದೆಯೋ ಅಲ್ಲಿ ಗ್ರಾಮದ ಅಭಿವೃದ್ಧಿಯಾಗಲು ಸಾಧ್ಯ ಎಂದರು.

ಸ್ವಾಮೀಜಿ ಕಾರ್ಯಗಳನ್ನು ಮಾಡುತ್ತಿರುವುದು ಸಂತೋಷ ತಂದಿದೆ. ಎಲ್ಲರೂ ಇಂತಹ ಚಟುವಟಿಕೆಗಳಲ್ಲಿ ಒಗ್ಗಟ್ಟಿನಿಂದ ಸಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಶ್ರೀ ಬಾಲಗಂಗಾಧರನಾಥಸ್ವಾಮಿ ಒಕ್ಕಲಿಗ ಟ್ರಸ್ಟ್​ ಉಪಾಧ್ಯಕ್ಷರು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಸಾರ್ವಜನಿಕರು ಭಕ್ತರು ಮತ್ತಿತರರು ಇದ್ದರು.