ಸಂಡೂರು: ಕೋಮು ಸೌಹಾರ್ದವನ್ನು ಕದಡುವ ಕೆಲಸವನ್ನು ವ್ಯವಸ್ಥಿತವಾಗಿ ಕಾಣದ ಕೈಗಳು ಮಾಡುತ್ತಾ ಬರುತ್ತಿವೆ ಎಂದು
ಶಾಸಕಿ ಅನ್ನಪೂರ್ಣಾ ತುಕಾರಾಮ್ ಹೇಳಿದರು.
ಪಟ್ಟಣದ ಹಳೇ ಚಪ್ಪರದಹಳ್ಳಿಯ ಮಸೀದಿಯಲ್ಲಿ ನೋಡಬನ್ನಿ ನಮ್ಮೂರ ಮಸೀದಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲಾ ಧರ್ಮಗ್ರಂಥಗಳ ಸಾರ ಒಂದೇ ಆಗಿದೆ. ಭಗವದ್ಗೀತೆ, ಖುರಾನ್, ಬೈಬಲ್‌ನಲ್ಲಿ ಪರಸ್ಪರರು ಪ್ರೀತಿ, ಪ್ರೇಮ, ಶಾಂತಿ ಸೌಹಾರ್ದಯುತವಾಗಿ ಬಾಳಬೇಕು ಎಂದು ಹೇಳಲಾಗಿದೆ. ಪರಸ್ಪರರು ಧರ್ಮವನ್ನು ಗೌರವಿಸಬೇಕು. ಮಕ್ಕಳನ್ನು ಚೆನ್ನಾಗಿ ಓದಿಸಿ ಒಳ್ಳೆಯ ನಾಗರಿಕರನ್ನಾಗಿ ಮಾಡಬೇಕು ಎಂದರು.