ಜಿಲ್ಲೆ

ಸಮಾನತೆ, ಸಹಬಾಳ್ವೆಯಿಂದ ಜೀವನ ನಡೆಸುವಂತಾಗಲಿ

ಬಸವರಾಜ ವೀರಪ್ಪ ಗರಗ

ಉಪ್ಪಿನಬೆಟಗೇರಿ: ಪಠ್ಯ ಪುಸ್ತಕದಲ್ಲಿನ ಕ್ರಾಂತಿಕಾರಿಗಳ ವಿಚಾರಗಳನ್ನು ಮರೆಮಾಚುವ ಪ್ರಯತ್ನ ನಡೆಯುತ್ತಿದೆ ಎಂದು ಧಾರವಾಡ ಜಿಲ್ಲಾ ಎಐಯುಟಿಯುಸಿ ಅಧ್ಯಕ್ಷ ಗಂಗಾಧರ ಬಡಿಗೇರ ಖೇದ ವ್ಯಕ್ತಪಡಿಸಿದರು.

ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಜಯಂತಿ ಅಂಗವಾಗಿ ಧಾರವಾಡ ಜಿಲ್ಲಾ ಎಐಯುಟಿಯುಸಿ ಕಾರ್ವಿುಕ ಸಂಘಟನೆ ವತಿಯಿಂದ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕ್ರಾಂತಿಕಾರಿಗಳ ಹೋರಾಟ, ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ. ಸಮಾಜದಲ್ಲಿನ ಎಲ್ಲ ವರ್ಗದ ಜನರು ಸಮಾನತೆ, ಸಹಬಾಳ್ವೆಯಿಂದ ಜೀವನ ನಡೆಸಬೇಕು. ಅನ್ಯಾಯದ ಮೇಲೆ ನ್ಯಾಯದ ಸ್ಥಾಪನೆಗಾಗಿ ಹಾಗೂ ಮಾನವನಿಂದ ಮಾನವನ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಕಾರ್ವಿುಕ ಸಂಘಟನೆ ಕೆಲಸ ಮಾಡುತ್ತಿದೆ ಎಂದರು.

ಭಗತ್ ಸಿಂಗ್ ಜೀವನದ ಕುರಿತು ಧಾರವಾಡ ಜಿಲ್ಲಾ ಎಐಯುಟಿಯುಸಿ ಉಪಾಧ್ಯಕ್ಷೆ ಭುವನಾ ಬಳ್ಳಾರಿ, ಧಾರವಾಡ ಅಂಗನವಾಡಿ ಯೂನಿಯನ್ ಸದಸ್ಯೆಯರಾದ ಕಸ್ತೂರಿ ಅಗಸಿಮನಿ ಹಾಗೂ ಕವಿತಾ ಮಸೂತಿ ಮಾತನಾಡಿದರು. ಅಂಗನವಾಡಿ ಶಿಕ್ಷಕರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಬಿಸಿಯುಟ ಹಾಗೂ ಕಟ್ಟಡ ಕಾರ್ವಿುಕರು ಉಪಸ್ಥಿತರಿದ್ದರು.