ಪಹಲ್ಗಾಮ್‌ನ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಆಂಧ್ರ ಪ್ರದೇಶದ ವೀರ ಯೋಧ ಮುರಳೀನಾಯ್ಕರಿಗೆ ಗಂಗಾವತಿ ವಿರುಪಾಪುರ ತಾಂಡಾದ ಸೇವಾಲಾಲ್ ವೃತ್ತದಲ್ಲಿ ಭಾನುವಾರ ರಾತ್ರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಗರಸಭೆ ಮಾಜಿ ಸದಸ್ಯ ರಾಮನಾಯ್ಕ, ಶ್ರೀ ಸೇವಾಲ್ ಮಹಾರಾಜ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಪಾಂಡುನಾಯ್ಕ,ಬಂಜಾರ ಸಮಾಜದ ಮುಖಂಡರಾದ ಪ್ರಕಾಶ ರಾಠೋಡ, ಹನುಮಂತ, ವೆಂಕಟೇಶ ಜಾಧವ್ ಇತರರಿದ್ದರು.ಗಂಗಾವತಿ ಶ್ರೀಚನ್ನಬಸವ ಸ್ವಾಮಿ ಮಠದಲ್ಲಿ ಶ್ರೀ ಮಲ್ಲಿಕಾರ್ಜುನ ಟ್ರಸ್ಟ್ ಕಮಿಟಿಯಿಂದ ಬೇಸಿಗೆ ನಿಮಿತ್ತ ಮಕ್ಕಳಿಗಾಗಿ ಹಮ್ಮಿಕೊಂಡ ಚಿಗುರು ಚೈತನ್ಯ ಉಚಿತ ಶಿಬಿರದ ಸಾಹಿತಿಗಳ ಪರಿಚಯ ಮತ್ತು ಸಂದರ್ಶನಲ್ಲಿ ಮಠದ ಧರ್ಮದರ್ಶಿ ಕೆ.ಚನ್ನಬಸಯ್ಯಸ್ವಾಮಿ ಸೋಮವಾರ ಮಾತನಾಡಿದರು. ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್, ನಿವೃತ್ತ ಪ್ರಾಚಾರ್ಯ ಪ್ರೊ.ಬಿ.ಸಿ.ಐಗೋಳ ಇತರರಿದ್ದರು. 
ಜಿಲ್ಲೆ

ವೀರಯೋಧರಿಗೆ ನೈತಿಕ ಬೆಂಬಲ ನೀಡಲಿ

ಗಂಗಾವತಿ: ಜಮ್ಮುಕಾಶ್ಮೀರದ ಪಹಲ್ಗಾಮ್‌ನ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಆಂಧ್ರ ಪ್ರದೇಶದ ವೀರ ಯೋಧ ಮುರಳೀನಾಯ್ಕ ಅವರಿಗೆ ನಗರದ ವಿರುಪಾಪುರತಾಂಡಾದ ಸೇವಾಲಾಲ್ ವೃತ್ತದಲ್ಲಿ ಭಾನುವಾರ ರಾತ್ರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಬಂಜಾರ ಸಮಾಜದ ಸದಸ್ಯರು, ದೀಪಪ್ರಜ್ವಲನದೊಂದಿಗೆ ಮೌನಾಚರಣೆ ಸಲ್ಲಿಸಿದರು. ಯೋಧನ ಆತ್ಮಕ್ಕೆ ಶಾಂತಿ ದೊರೆಯಲಿ ಮತ್ತು ಕುಟುಂಬಕ್ಕೆ ದುಃಖಭರಿಸುವ ಶಕ್ತಿ ದೇವರು ನೀಡಲೆಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಶ್ರೀ ಸೇವಾಲಾಲ್ ಮಹಾರಾಜ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಪಾಂಡುನಾಯ್ಕ ಮಾತನಾಡಿ, ದೇಶರಕ್ಷಣೆಗೆ ಪಣತೊಟ್ಟ ವೀರಯೋಧ ಅಗಲುವಿಕೆಯಿಂದ ದೇಶಕ್ಕೆ ನಷ್ಟವಾಗಿದ್ದು, ಉಗ್ರರ ಶಮನಕ್ಕೆ ಸಜ್ಜಾಗಿರುವ ವೀರಯೋಧರಿಗೆ ಪ್ರತಿಯೊಬ್ಬರೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ನೈತಿಕ ಬೆಂಬಲ ನೀಡಬೇಕಿದೆ ಎಂದರು.

ನಗರಸಭೆ ಮಾಜಿ ಸದಸ್ಯ ರಾಮನಾಯ್ಕ, ಬಂಜಾರ ಸಮಾಜದ ಮುಖಂಡರಾದ ಪ್ರಕಾಶ ರಾಠೋಡ, ಹನುಮಂತ, ವೆಂಕಟೇಶ ಜಾಧವ್, ಪ್ರಕಾಶ್ ಕೊಟಗಿ, ಕಷ್ಣ ನಾಯ್ಕ, ಠಾಕೂ ನಾಯ್ಕ, ರಾಜು, ವೆಂಕಟೇಶ, ವೆಂಕಣ್ಣ, ಲೋಕೇಶ, ಮಂಜುನಾಥ, ಉಮೇಶ ಸೇರಿ ಗೋರ್ ಸೇನಾ ಸದಸ್ಯರಿದ್ದರು.