ಜಿಲ್ಲೆ

ಶಿವಾಜಿ ಮಹಾರಾಜರ ತತ್ವಾದರ್ಶ ಮೈಗೂಡಿಸಿಕೊಳ್ಳಲಿ

ಕಾರ್ಕಳ: ಶಿವಾಜಿ ಮಹಾರಾಜರ ತತ್ವ ಸಿದ್ಧಾಂತಗಳನ್ನು ಯುವಜನಾಂಗ ಅಳವಡಿಸಿಕೊಳ್ಳಬೇಕು. ಶಿವಾಜಿ ಮಹಾರಾಜರು ಕೇವಲ ಮರಾಠ ಜನಾಂಗಕ್ಕೆ ಸೀಮಿತವಾಗಿರದೆ ಹಿಂದು ಸವಾಜದ ರಕ್ಷಕರಾಗಿದ್ದರು ಎಂದು ಶಾಸಕ ವಿ.ಸುನೀಲ್‌ಕುಮಾರ್ ಹೇಳಿದರು.

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಉಡುಪಿ ಜಿಲ್ಲಾ ಟಕದ ಆಶ್ರಯದಲ್ಲಿ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಿವಾಜಿ ಮಹಾರಾಜರ 398ನೇ ಜಯಂತ್ಯುತ್ಸವ, ಮರಾಠ ಪರಿಷತ್‌ನ ಸುವರ್ಣ ಮಹೋತ್ಸವ, ವಿದ್ಯಾರ್ಥಿ ವೇತನ, ಸಹಾಯಧನ ವಿತರಣಾ ಸವಾರಂಭ ಉದ್ಘಾಟಿಸಿ ಮಾತನಾಡಿದರು.

ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ರಾಜ್ಯ ಉಪಾಧ್ಯಕ್ಷ ಎಂ.ನಾಗೇಶ್ ರಾವ್ ಪುಷ್ಪಾರ್ಚನೆ ಮಾಡಿದರು.

ಎಸ್.ಜಿ.ರವಿ ಸಾವಂತ್ ಸಹಾಯಧನ ವಿತರಿಸಿದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ಸಾಧಕರನ್ನು ಅಭಿನಂದಿಸಲಾಯಿತು.

ಟಿ.ಆರ್.ವೆಂಕಟರಾವ್ ಚವಾಣ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀನಿವಾಸ ಮಗರ್, ಬೋಳ ಸದಾಶಿವ ಶೆಟ್ಟಿ, ನವೀನ್ ಸುವರ್ಣ, ಕೇಶವ ರಾವ್ ವಾನೆ, ಅನಂತ್ ರಾವ್ ಗಾಯಕ್ವಾಡ್, ಶ್ರೀನಿವಾಸ್ ರಾವ್ ಮದನೆ, ಭಾಗ್ಯಲಕ್ಷ್ಮೀ ಸುಧಾಕರ್ ಸಿಂಧ್ಯಾ, ಗೋಪಾಲ್ ರಾವ್ ಪವರ್ ಉಪಸ್ಥಿತರಿದ್ದರು.

ಕೆ.ಬಿ.ಕೀರ್ತನ್ ಕುವಾರ್ ಲಾಡ್ ಸ್ವಾಗತಿಸಿದರು. ಪ್ರಕಾಶ್ ರಾವ್ ಕವಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸುಮತಿ ಪವರ್ ವಂದಿಸಿದರು. ಸಂತೋಷ್ ರಾವ್ ಕವಡೆ ಕಾರ್ಯಕ್ರಮ ನಿರೂಪಿಸಿದರು.