ಕಂಪ್ಲಿಯಲ್ಲಿ ಚಿಕ್ಕೇನಕೊಪ್ಪ ಚನ್ನವೀರ ಶರಣರ ಬಳಗದ ಕಣ್ಣಿನ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಬಳಗಾನೂರಿನ ಚಿಕ್ಕೇನಕೊಪ್ಪದ ಶಿವಶಾಂತವೀರ ಶರಣರು ಚಾಲನೆ ನೀಡಿದರು. ಪ್ರಮುಖರಾದ ಜಿ.ಲಿಂಗನಗೌಡ, ಡಾ.ಜಂಬುನಾಥಗೌಡ, ಶಾಂತಿಲಾಲ್ ಸಿಂಘ್ವಿ, ಪೋಲೂರು ನಾರಾಯಣಪ್ಪ, ಪಿ.ಮೂಕಯ್ಯಸ್ವಾಮಿ ಇತರರಿದ್ದರು. 
ಜಿಲ್ಲೆ

ಪರೋಪಕಾರ ಗುಣ ಬೆಳೆಸಿಕೊಳ್ಳಲಿ

ರುದ್ರಪ್ಪ ವಾಲಿ

ಕಂಪ್ಲಿ: ಬಡವ, ದೀನದಲಿತರ ಪರವಾಗಿ ಸಂಘ ಸಂಸ್ಥೆಗಳು ಸೇವೆ ಸಲ್ಲಿಸಿದಾಗಲೇ ಸಾರ್ಥಕ್ಯ ಪಡೆಯಲು ಸಾಧ್ಯ ಎಂದು ಬಳಗಾನೂರಿನ ಚಿಕ್ಕೇನಕೊಪ್ಪದ ಶಿವಶಾಂತವೀರ ಶರಣರು ಹೇಳಿದರು.

ಇಲ್ಲಿನ ಕೊಟ್ಟಾಲ್ ರಸ್ತೆಯಲ್ಲಿ ಶ್ರೀಚಿಕ್ಕೇನಕೊಪ್ಪ ಚನ್ನವೀರ ಶರಣರ ಬಳಗದ ಕಣ್ಣಿನ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಪರೋಪಕಾರ ಗುಣ ಬೆಳೆಸಿಕೊಂಡಲ್ಲಿ ಸಮಾಜದಲ್ಲಿ ನೆಮ್ಮದಿಯ ಸಮೃದ್ಧಿ ಕಾಣಲು ಸಾಧ್ಯ. ಕಳೆದ ಮೂವತ್ತೈದು ವರ್ಷಗಳಿಂದಲೂ ಚಿಕ್ಕೇನಕೊಪ್ಪ ಚನ್ನವೀರ ಶರಣರ ಬಳಗದಿಂದ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಿಕೊಂಡು ಬಂದ ಸೇವೆ ಅನನ್ಯವಾಗಿದೆ ಎಂದರು.

ಕಣ್ಣಿನ ಆಸ್ಪತ್ರೆಗೆ 17 ಸೆಂಟ್ಸ್ ಭೂದಾನ ಮಾಡಿದ ಪೋಲೂರು ನಾರಾಯಣಪ್ಪ, ಪ್ರಮುಖರಾದ ಪಿ.ಕೊಂಡಯ್ಯ, ರಫಿಕ್, ಲತಾ, ಪಿ.ಸತ್ಯನಾರಾಯಣ ಸೇರಿ ದಾನಿಗಳನ್ನು ಸನ್ಮಾನಿಸಿದರು. ಪದಾಧಿಕಾರಿಗಳಾದ ಡಾ.ಎ.ಸಿ.ದಾನಪ್ಪ, ಜವೇರಲಾಲ್ ಜೈನ್, ಎಲಿಗಾರ ವೆಂಕಟರೆಡ್ಡಿ, ಜಿ.ವಿ.ಸತ್ಯನಾರಾಯಣ, ಬಿ.ಅಂಬಣ್ಣ, ಬಳ್ಳಾರಿ ನಿರಂಜನ, ಬಿ.ನಾರಾಯಣಪ್ಪ, ಪಿ.ಬ್ರಹ್ಮಯ್ಯ, ವಾಲಿ ಕೊಟ್ರಪ್ಪ, ಸಿ.ಆರ್.ಬಿ.ರಾವ್, ಸಾಯಿಬಾಬಾ, ಬಣಗಾರ ಚಂದ್ರಪ್ಪ, ಟಿ.ಕೊಟ್ರೇಶ, ಅಳ್ಳಳ್ಳಿ ವೀರೇಶ, ಎಸ್.ಎಂ.ನಾಗರಾಜ ಇತರರಿದ್ದರು.