ಮುಧೋಳ ರನ್ನ ಕ್ರೀಡಾಂಗಣದಲ್ಲಿ ಜರುಗಿದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಲ್ಲೂಕಾ ದಂಡಾಧಿಕಾರಿ ಮಹದೇವ ಸನಮುರಿ ದ್ವಜಾರೋಹಣ ನೆರವೇರಿಸಿದರು. ಸುನಂದಾ ತೇಲಿ, ಎಂ.ಎಂ.ಬಾಗವಾನ್, ಸಂಗಪ್ಪ ಇಮ್ಮನ್ನವರ, ಗುರುಪಾದ ಕುಳಲಿ, ಮತ್ತಿತರರಿದ್ದಾರೆ. 
ಜಿಲ್ಲೆ

ದೇಶದ ಏಳಿಗೆಗೆ ಸದಾಕಾಲ ಶ್ರಮಿಸೋಣ

ಮುಧೋಳ: ಯುವ ಸಮೂಹ ಸ್ವಾತಂತ್ರೃ ರಕ್ಷಣೆ ಹಾಗೂ ದೇಶದ ಏಳಿಗೆಗೆ ಸದಾಕಾಲ ಶ್ರಮಿಸಬೇಕು ಎಂದು ತಾಲೂಕು ದಂಡಾಧಿಕಾರಿ ಮಹದೇವ ಸನಮುರಿ ಹೇಳಿದರು.

ನಗರದ ರನ್ನ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಭಾನುವಾರ ಆಯೋಜಿಸಿದ್ದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರತಿ ಪ್ರಜೆಯು ನಮ್ಮ ಸಂವಿಧಾನದ ಬಗ್ಗೆ ತಿಳಿದುಕೊಂಡು, ರಾಷ್ಟ್ರೀಯ ಭಾವೈಕ್ಯತೆಯಲ್ಲಿ ಮುನ್ನಡೆಯಬೇಕು. ಈ ನಿಟ್ಟಿನಲ್ಲಿ ರಾಷ್ಟ್ರಸೇವೆ ಹಾಗೂ ರಾಷ್ಟ್ರ ಚಿಂತನೆಗಾಗಿ ನಮ್ಮ ಜೀವನದ ಕೆಲವು ದಿನಗಳನ್ನು ಮೀಸಲಿಡೋಣ ಎಂದರು.

ನಗರಸಭೆ ಅಧ್ಯಕ್ಷ ಸುನಂದಾ ತೇಲಿ, ಉಪಾಧ್ಯಕ್ಷ ಎಂ.ಎಂ. ಬಾಗವಾನ್, ಎಪಿಎಂಸಿ ಅಧ್ಯಕ್ಷ ಸಂಗಪ್ಪ ಇಮ್ಮನ್ನವರ, ನಗರಸಭೆ ಸದಸ್ಯ ಗುರುಪಾದ ಕುಳಲಿ, ಲಕ್ಷ್ಮೀ ದಾಸರ, ಕೆ.ಕೆ. ಕೋರೆವ್ವಗೋಳ, ಎ.ಸಿ. ಪಮ್ಮಾರ ಮಾಜಿ ಲೆಫ್ಟಿನೆಂಟ್ ಜನರಲ್ ರಮೇಶ ಹಲಗಲಿ, ಮೇಜರ್ ಅಪ್ಪಾಸಾಹೇಬ ನಿಂಬಾಳಕರ, ಮಾಜಿ ಸಿಪಿಐ ಮಹದೇವ ಶಿರಹಟ್ಟಿ, ಇಓ ಉಮೇಶ ಶಿದ್ನಾಳ, ಸೈನಿಕರ ಸಂಘದ ಅಧ್ಯಕ್ಷ ಶ್ರೀಶೈಲ ಪಸಾರ, ಮೋಹನ ಕೋರಡ್ಡಿ, ಹನಿಪ್ ತಹಸೀಲ್ದಾರ, ಬಿಇಒ ಸಮೀರ ಮುಲ್ಲಾ, ಅಡಿವೆಪ್ಪ ಛಬ್ಬಿ, ಶ್ರೀಶೈಲ ಕುರಣಿ, ಸಂಗಮೇಶ ನೀಲಗುಂದ ಮತ್ತಿತರರಿದ್ದರು.