ಜಿಲ್ಲೆ

ನಿಜಸುಖಿ ಅಪ್ಪಣ್ಣನವರ ಸನ್ಮಾರ್ಗದಲ್ಲಿ ಮುನ್ನಡೆಯೋಣ

ಮುಂಡರಗಿ: ಬಸವಾದಿಶರಣರು ಸಮಾಜಕ್ಕೋಸ್ಕರ ಬದುಕಿದವರು. ಹಡಪದ ಅಪ್ಪಣ್ಣನವರು ತಮ್ಮ ವಚನಗಳ ಮೂಲಕ ಸಮಾಜವನ್ನು ಸರಿದಾರಿಗೆ ತರುವ ಕೆಲಸ ಮಾಡಿದರು. ಅವರು ಹಾಕಿಕೊಟ್ಟಿರುವ ಸನ್ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯಬೇಕು ಎಂದು ಹಡಪದ ಸಮಾಜದ ತಾಲೂಕಾಧ್ಯಕ್ಷ ಈರಣ್ಣ ಹಡಪದ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕಾಡಳಿತ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ನಿಜಸುಖಿ ಹಡಪದ ಅಪ್ಪಣ್ಣ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಹಡಪದ ಅಪ್ಪಣ್ಣನವರು 250ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದರು. 12ನೇ ಶತಮಾನದಲ್ಲಿ ಮಹಿಳೆಯರಿಗೆ ಮತ್ತು ತುಳಿತಕ್ಕೊಳಗಾದ ಕೆಳವರ್ಗದ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಿದರು ಎಂದರು.

ಉಪತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ ಮಾತನಾಡಿ, ಹಡಪದ ಅಪ್ಪಣ್ಣನವರು ಅತ್ಯುತ್ತಮ ವಚನ ರಚಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಜೀವನ ನಡೆಸಿ ಉತ್ತಮ ರೀತಿಯಲ್ಲಿ ಬಾಳಬೇಕು ಎಂದರು. ಗ್ರೇಡ್-2 ತಹಸೀಲ್ದಾರ್ ಕೆ. ರಾಧಾ, ಜಗದೀಶ ಹಡಪದ, ತಿಪ್ಪಣ್ಣ ಹರ್ಲಾಪುರ, ಲಕ್ಷ್ಮೀಕಾಂತ ಭಾವಿಮನಿ, ಶೇಖಪ್ಪ ಹಡಪದ, ಬಿ.ಎಸ್. ಹರ್ಲಾಪುರ, ನಾಗರಾಜ ಹಡಪದ, ಹನುಮಂತ ಹಡಪದ, ಸುರೇಶ ಹಡಪದ, ಮನೋಹರ ಕಾತರಕಿ, ಇತರರಿದ್ದರು.