ಕಿಕ್ಕೇರಿ ಕೆಪಿಎಸ್ ಶಾಲೆಯಲ್ಲಿ ಮಂಗಳವಾರ ರಾಷ್ಟ್ರೀಯ ಏಕತಾ ದಿವಸ ಕಾರ್ಯಕ್ರಮ ನಡೆಯಿತು. ಉಪಪ್ರಾಂಶುಪಾಲ ಎಚ್.ಎಂ. ಬಸವರಾಜಪ್ಪ, ಶಿಕ್ಷಕರಾದ ಬಿ.ಎನ್.ಪರಶಿವಮೂರ್ತಿ, ಸುರೇಶ್, ದೀಪಕ್, ಪ್ರಸನ್ನ, ದೇವರಾಜು, ಕೃಷ್ಣಪ್ಪ, ರಾಗಿಣಿ, ನಂದಿನಿ, ರಮ್ಯಾ, ಲೀಲಾವತಿ ಇದ್ದರು. 
ಜಿಲ್ಲೆ

ಏಕತೆ ದೇಶದ ಶಕ್ತಿಯಾಗಲಿ

ಕಿಕ್ಕೇರಿ: ಅನೇಕತೆಯಲ್ಲಿ ಏಕತೆಯನ್ನು ಹೊಂದಿರುವ ಬೃಹತ್ ರಾಷ್ಟ್ರ ನಮ್ಮದಾಗಿದೆ ಎಂದು ಉಪಪ್ರಾಂಶುಪಾಲ ಎಚ್.ಎಂ. ಬಸವರಾಜಪ್ಪ ತಿಳಿಸಿದರು.

ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಏಕತಾ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಾಲಗಂಗಾಧರ ತಿಲಕ್ ಅವರು ಜನಿಸಿದ ಪುಣ್ಯದಿನವನ್ನು ಏಕತೆಯ ದಿನವಾಗಿ ಆಚರಿಸಲಾಗುತ್ತಿದೆ. ರಾಷ್ಟ್ರದ ಏಕೀಕರಣಕ್ಕೆ ತಮ್ಮ ಜೀವಿತಾವಧಿಯನ್ನು ಮೀಸಲಿಟ್ಟಿದ್ದರು. ರಾಷ್ಟ್ರದ ಸಮಗ್ರತೆ, ಭದ್ರತೆಗೆ ಸದಾ ಚಿಂತಿಸಿ ಅದನ್ನು ಅನುಷ್ಠಾನ ತಂದ ಮೇರು ವ್ಯಕ್ತಿ. ಇವರ ಬದುಕನ್ನು ತಿಳಿದು ಕಿಂಚಿತ್ತಾದರೂ ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.

ಮಕ್ಕಳಿಗೆ ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞೆ ಬೋಧಿಸಲಾಯಿತು. ಶಿಕ್ಷಕರಾದ ಬಿ.ಎನ್.ಪರಶಿವಮೂರ್ತಿ, ಸುರೇಶ್, ದೀಪಕ್, ಪ್ರಸನ್ನ, ದೇವರಾಜು, ಕೃಷ್ಣಪ್ಪ, ರಾಗಿಣಿ, ನಂದಿನಿ, ರಮ್ಯಾ, ಲೀಲಾವತಿ ಹಾಜರಿದ್ದರು.