ಹಗರಿಬೊಮ್ಮನಹಳ್ಳಿ ಪುರಸಭೆ ಕಚೇರಿಯಿಂದ ಹಮ್ಮಿಕೊಂಡಿದ್ದ ಆಂದೋಲನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಪುರಸಭೆ ಅಧ್ಯಕ್ಷ ಮರಿರಾಮಪ್ಪ ಫಾರ್ಮ್-3 ವಿತರಿಸಿದರು.ಪುರಸಭೆ ಉಪಾಧ್ಯಕ್ಷೆ ಅಂಬಿಕಾ ದೇವೇಂದ್ರ, ಸದಸ್ಯರಾದ ಮಂಜುಳಾ ಕೃಷ್ಣನಾಯ್ಕ, ದೀಪಕ್ ಕಠಾರಿ, ಜೋಗಿ ಹನುಮಂತಪ್ಪ, ನವೀನ್ ಕುಮಾರ್, ಜನ್ನು ನಾಗರಾಜ, ಅಜೀಜುಲ್ಲಾ, ಪ್ರಮುಖರಾದ ಎಸ್.ಎಂ.ವಿಜಯಕುಮಾರ್, ಅಲ್ಲಾಭಕ್ಷಿ, ಸಿಬ್ಬಂದಿ ಇತರರಿದ್ದರು. 
ಜಿಲ್ಲೆ

ಜಾತ್ಯಾತೀತವಾಗಿ ಅಭಿವೃದ್ಧಿ ಆಗಲಿ

ಗಾಯತ್ರಿ ಮಾಲಿಪಾಟೀಲ್

ಹಗರಿಬೊಮ್ಮನಹಳ್ಳಿ: ಸರ್ಕಾರಿ ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪಬೇಕು. ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ ಜಾತ್ಯಾತೀತವಾಗಿ ಅಭಿವೃದ್ಧಿ ಆಗಬೇಕು ಎಂದು ಪುರಸಭೆ ಅಧ್ಯಕ್ಷ ಮರಿರಾಮಪ್ಪ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪುರಸಭೆ ಆಡಳಿತದಿಂದ ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಫಾರ್ಮ್-3 ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾರ್ವಜನಿಕರು ಅರ್ಜಿಯ ಜತೆ ದಾಖಲೆಗಳನ್ನು ಪಡೆಯಲು ಕಚೇರಿಗೆ ಅಲೆಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಪ್ಪಿಸಲು ಸ್ಥಳದಲ್ಲಿಯೇ ಅರ್ಜಿ ಸಲ್ಲಿಕೆ ಮತ್ತು ದಾಖಲಾತಿ ಪಡೆಯಲು ಫಾರ್ಮ್-3 ವಿತರಿಸಲಾಗುತ್ತಿದೆ. ಇದು ಒಂದು ದಿನಕ್ಕೆ ಮುಗಿಯದಿದ್ದರೆ ಆಯಾ ವಾರ್ಡ್‌ಗಳಲ್ಲಿ ಮತ್ತು ಹಳೇ ಊರಿನ 7 ವಾರ್ಡ್‌ಗಳಲ್ಲಿ ಒಂದು ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಪುರಸಭೆ ಉಪಾಧ್ಯಕ್ಷೆ ಅಂಬಿಕಾ ದೇವೇಂದ್ರ, ಸದಸ್ಯರಾದ ಮಂಜುಳಾ ಕೃಷ್ಣನಾಯ್ಕ, ದೀಪಕ್ ಕಠಾರಿ, ಜೋಗಿ ಹನುಮಂತಪ್ಪ, ನವೀನ್ ಕುಮಾರ್, ಜನ್ನು ನಾಗರಾಜ, ಅಜೀಜುಲ್ಲಾ, ಪ್ರಮುಖರಾದ ಎಸ್.ಎಂ.ವಿಜಯಕುಮಾರ್, ಅಲ್ಲಾಭಕ್ಷಿ ಇತರರಿದ್ದರು.