ಜಿಲ್ಲೆ

ಹೆಚ್ಚೆಚ್ಚು ರಕ್ತದಾನ ಶಿಬಿರ ನಡೆಯಲಿ

Haveri - Desk - Ganapati Bhat

ಸವಣೂರ: ರಕ್ತ ಯಾವುದೋ ಅಂಗಡಿ-ಮುಂಗಟ್ಟುಗಳಲ್ಲಿ ಸಿಗುವ ವಸ್ತುವಲ್ಲ. ಮನುಷ್ಯರ ದೇಹದಲ್ಲಿ ಉತ್ಪತ್ತಿಯಾಗುವ ಸಂಪನ್ಮೂಲವಾಗಿದೆ. ಇಂದಿನ ದಿನಗಳಲ್ಲಿ ರಕ್ತದ ಅಗತ್ಯ ಹೆಚ್ಚಿದ್ದು, ಶಸ್ತ್ರ ಚಿಕಿತ್ಸೆ, ಮಹಿಳೆಯರಿಗೆ ಹಾಗೂ ಕಡಿಮೆ ರಕ್ತ ಇರುವ ರೋಗಿಗಳಿಗೆ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚೆಚ್ಚು ರಕ್ತದಾನ ಶಿಬಿರಗಳು ನಡೆಯಬೇಕು ಎಂದು ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಯಶವಂತ ಹೇಳಿದರು.

ತಾಲೂಕಿನ ಶಿರಬಡಗಿ ಗ್ರಾಮದ ಶ್ರೀ ಅಗಸಿ ಬಸವೇಶ್ವರ ಯುವಕರ ಸಂಘದ ವತಿಯಿಂದ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮ ದೇವರ ಜಾತ್ರೆಯಲ್ಲಿ ಯುವಕರು ರಕ್ತದಾನ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದರು.

ರಕ್ತನಿಧಿ ಕೇಂದ್ರದ ಹಿರಿಯ ಪ್ರಯೋಗ ತಾಂತ್ರಿಕ ಅಧಿಕಾರಿ ಬಸವರಾಜ ಕಮತರ ಮಾತನಾಡಿ, ಯುವಕರು ಯಾವುದೇ ತಪ್ಪು ಭಾವನೆ ಇಲ್ಲದೇ ರಕ್ತದಾನ ಮಾಡಬೇಕು. ರಕ್ತದಾನದಿಂದ ಆರೋಗ್ಯ ಸಮತೋಲನ ಕಾಪಾಡಲು ಸಹಕಾರಿಯಾಗಲಿದೆ ಎಂದರು.

ಆರೋಗ್ಯ ನಿರೀಕ್ಷಣಾಧಿಕಾರಿ ಶರಣಪ್ಪ ಕಲ್ಲಮ್ಮನವರ, ತಾಲೂಕು ಆಸ್ಪತ್ರೆಯ ರಕ್ತನಿಧಿ ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ಮಾಹಾಂತೇಶ ಹೊಳೆಮ್ಮನವರ ಅವರು ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿದರು.

ಶಿಬಿರದಲ್ಲಿ 65 ಯುವ ಜನರು ರಕ್ತದಾನ ಮಾಡಿದರು. ಗ್ರಾಪಂ ಸದಸ್ಯರಾದ ಶರಣಬಸಪ್ಪ ಪರಮ್ಮನವರ, ನಿಂಗಪ್ಪ ಆರೇರ, ಪ್ರಮುಖರಾದ ನಿಂಗರಾಜ ಅಂಗಡಿ, ಸಂದೀಪಗೌಡ ಪಾಟೀಲ, ನಾಗನಗೌಡ ತೋಟದ, ರಾಜು ಪಾಟೀಲ, ಮಹಾಂತಗೌಡ ದೊಡ್ಡಮನಿ, ಮೋಹನ ಪಾಟೀಲ, ಸುನೀಲಗೌಡ ನೀರಲಗಿ, ನವೀನ ಅರಳಿಹಳ್ಳಿ, ಸಿದ್ದಪ್ಪ ಮಲ್ಲೂರ, ಮಲ್ಲಿಕಾರ್ಜುನ ನೀರಲಗಿ, ಮಲ್ಲಿಕಾರ್ಜುನ ಅಕ್ಕೂರ, ಮೈಲಾರಿ ತಳವಾರ, ನಾಗರಾಜ ಕಡಕೋಳ, ನಾಗರಾಜ ತಳವಾರ, ಪ್ರಕಾಶಗೌಡ ಪಾಟೀಲ, ಈರಣ್ಣ ಪೂಜಾರ ಜಿಲ್ಲಾ ರಕ್ತನಿಧಿ ಕೇಂದ್ರದ ಸಿಬ್ಬಂದಿ ಇತರರಿದ್ದರು.