ಚೌಳಹಿರಿಯೂರು: ಶಾಲ ಹಂತದಲ್ಲೇ ಓದಿನ ಜತೆಗೆ ಬಾಯಕತ್ವ ಗುಣವನ್ನು ಬೆಳಸಿಕೊಳ್ಳಲು ವಿದ್ಯಾರ್ಥಿ ಸಂಘ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿ ಎಂದು ಮುಖ್ಯಶಿಕ್ಷಕ ಎನ್.ಎಸ್.ನಾಗರಾಜ್ ಹೇಳಿದರು.
ವಡೇರಹಳ್ಳಿ ಶ್ರೀಮೃತ್ಯಂಜಯ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ನಾಯಕತ್ವ ಗುಣಗಳ ಬಗ್ಗೆ ಅರಿವಿರಬೇಕು ಎಂದರು. ಶಿಕ್ಷಕ ಕೆ.ರವಿ ಮಾತನಾಡಿ,ವಿದ್ಯಾರ್ಥಿ ಶಕ್ತಿ ಅನಾವರಣವಾಗಬೇಕಾದರೆ ನಾಯಕ ಪ್ರಯತ್ನ ನಡೆಯಬೇಕು. ಸಮಾಜದ ಬೇರೆ ಬೇರೆ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿದರೆ ಮಾತ್ರ ಯುವ ಸಮಾಜದ ಸದ್ಬಳಕೆಯಾಗಲಿದೆ ಎಂದರು. ಎಸ್.ಕೆ. ಶ್ರೀಧರ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋದಿಸಿದರು. ರಾಕೆಶ್, ಶೈಲಾ ಇದ್ದರು.