ಹೊಸಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿವಿಧ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ನಾಡೊಜ ಬರಗೂರು ರಾಮಚಂದ್ರಪ್ಪ ಮಾತನಾಡಿದರು.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸುರೇಶ್​, ಮುನೇಗೌಡ, ಅಖಿಲ್​ ಅಹಮದ್​, ವಕೀಲ ಸುಬ್ರಹ್ಮಣಿ ಇದ್ದರು. 
ಜಿಲ್ಲೆ

ಶಿಕ್ಷಣದಲ್ಲಿರಲಿ ಸಾಂಸತಿಕ ಸಾಮರಸ್ಯ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಹೊಸಕೋಟೆ : ಶಿಕ್ಷಣ ಎಂದರೆ ಕೇವಲ ತಂತ್ರಜ್ಞಾನ ಆಧಾರಿತ ಕಲಿಕೆ ಅಲ್ಲ. ಅದು ಜ್ಞಾನ, ಶಿಸ್ತು, ಜಾತ್ಯತಿತ, ಸಾಂಸತಿಕ ಸಾಮರಸ್ಯ ಒಳಗೊಂಡಿರಬೇಕು ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ತಿಳಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ, ಸಾಂಸತಿಕ, ಕ್ರೀಡೆ, ಎಸ್​ಎಸ್​ಎಸ್​, ಎನ್​ ಸಿಸಿ, ರೆಡ್​ ಕ್ರಾಸ್​, ರೋವರ್ಸ್​ ರೇರ್ಜಸ್​ ಟಕ ಮತ್ತು ವಿವಿಧ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ನಾವೆಲ್ಲ ತಂತ್ರಜ್ಞಾನದ ಹಿಂದೆ ಓಡುತ್ತಿದ್ದೇವೆ. ತಂತ್ರಜ್ಞಾನದ ಆವಿಷ್ಕಾರ ಇಂದು ನಿನ್ನೆಯದಲ್ಲ. ಮನುಷ್ಯ ಬೆಂಕಿಯನ್ನು ಅವಿಷ್ಕರಿಸಿದ್ದಕ್ಕೂ ಪೂರ್ವದಲ್ಲೇ ಹುಟ್ಟಿಕೊಂಡಿರುವುದು. ಮನುಷ್ಯತ್ವ ಮತ್ತು ಜಗತ್ತಿಗೆ ಜ್ಞಾನದ ಬೆಳಕು ಚೆಲ್ಲಿದ್ದು ಬುದ್ಧ ಅಂತ ಹೆಮ್ಮೆಯಿಂದ ಹೇಳುತ್ತೇವೆ. ಆದರೆ, ಪ್ರಸ್ತುತ ನಾವೆಲ್ಲ ಬುದ್ಧನನ್ನು ಬಿಟ್ಟು ಎಐ ನಂತಹ ತಂತ್ರಜ್ಞಾನದ ಹಿಂದೆ ಹೋಗುತ್ತಿದ್ದೇವೆ. ಅದೇ ದುರಂತ. ಎಐನಲ್ಲಿ ಸಾಕಷ್ಟು ತಪ್ಪುಗಳಿವೆ. ಅವುಗಳನ್ನು ಸರಿಪಡಿಸುವ ಅನಿವಾರ್ಯ ಇದೆ. ಮನುಷ್ಯನಿಗೆ ತಾಂತ್ರಿಕತೆಯೊಂದಿದ್ದರೆ ಸಾಲದು, ಸಾತ್ವಿಕತೆ ಅರ್ಥಮಾಡಿಕೊಳ್ಳುವ ಮನಸ್ಸು ಬೇಕು. ವಿಜ್ಞಾನಿ, ವೈದ್ಯನಾಗುವ ಕನಸು ಕಾಣುವುದರಲ್ಲಿ ತಪ್ಪಿಲ್ಲ. ಆದರೆ ಸಮಾನತೆ, ಸೌಹಾರ್ದ, ಮಾನವೀಯ ಮೌಲ್ಯ ಮರೆಯಬಾರದು ಎಂದರು. ಉಪನ್ಯಾಸಕರಾದ ವಿಶ್ವೇಶ್ವರಯ್ಯ, ರವಿ, ಮಂಜುಳಾ, ಗಾಯಿತ್ರಮ್ಮ, ಮಂಜುನಾಥ್​, ಶ್ರೀನಿವಾಸ ಆಚಾರಿ, ಶ್ರೀನಿವಾಸಪ್ಪ, ಸಾಧಿಕ್​, ಮುನಿರಾಜು ಇತರರು ಇದ್ದರು.

ಆತ್ಮಾವಲೋಕನ ಅಗತ್ಯ : ಹೆಣ್ಣು ನಾಲ್ಕು ಗೋಡೆಗೆ ಸೀಮಿತವಲ್ಲ, ಅವಳಿಗೂ ಬದುಕಿದೆ, ಶಿಕ್ಷಣ ಪಡೆಯುವ ಹಕ್ಕಿದೆ ಎಂದು ಸಾವಿತ್ರಿ ಬಾಯಿುಲೆ ಪುರುಷ ಸಮಾಜದ ವಿರುದ್ಧ ಹೋರಾಡಿದವರು. ಆದರೆ ಸದ್ಯ ಮಹಿಳೆಗೆ ದೇಶದಲ್ಲಿ 2ನೇ ಸ್ಥಾನ, ವರದಿಗಳ ಪ್ರಕಾರ ದೇಶದಲ್ಲಿ ದಿನಕ್ಕೆ 86 ಜನ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಎಂದರೆ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ ಎಂದು ಪ್ರಾಂಶುಪಾಲ ರಾಮಲಿಂಗಪ್ಪ ಟಿ. ಬೇಗೂರು ಹೇಳಿದರು. ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೂರ್ವ ಪೀಠಿಕೆ ಪಠಿಸುವುದರ ಮೂಲಕ ನಾನು ಸಂವಿಧಾನಕ್ಕೆ ಗೌರವ ಸಲ್ಲಿಸಿದ್ದೇನೆ ಎಂದು ತಿಳಿದುಕೊಳ್ಳುವ ಕಾಲ ಬಂದಾಗಿದೆ. ನೈಜವಾಗಿ ಪ್ರತಿಯೊಬ್ಬರೂ ಎಷ್ಟರ ಮಟ್ಟಿಗೆ ಸಂವಿಧಾನಕ್ಕೆ ಬದ್ಧರಾಗಿದ್ದೇವೆ ಎಂಬುದನ್ನು ಪ್ರಶ್ನಿಸಿಕೊಂಡರೆ ಅರ್ಥವಾಗುತ್ತದೆ ಎಂದರು.