ಜಿಲ್ಲೆ

ಹಲ್ಲೆಗೈದವರ ಮೇಲೆ ಕ್ರಮವಾಗಲಿ

ಎಂ.ಎಸ್​.ಹಿರೇಮಠ ಬೆಳಗಾವಿ

ಸವದತ್ತಿ: ಯಲ್ಲಮ್ಮ ದೇವಸ್ಥಾನದಲ್ಲಿ ಈಚೆಗೆ ಧಾರವಾಡದ ಶ್ರೀರಾಮ ಸೇನೆ ಜಿಲ್ಲಾಧ್ಯ ಅಣ್ಣಪ್ಪ ದಿವಟಗಿ ಮೇಲೆ ನಡೆದ ಹಲ್ಲೆ ಖಂಡನೀಯ. ಹಲ್ಲೆ ಮಾಡಿದ ಪೊಲೀಸ್​ ಮತ್ತು ಹೋಮ್​ ಗಾರ್ಡ್​ ಸಿಬ್ಬಂದಿ ಮೇಲೆ ಕಾನೂನು ಕ್ರಮ ತೆಗೆದುಕೊಂಡು ಅಮಾನತುಗೊಳಿಸಬೇಕೆಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯ ಪ್ರಮೋದ ಮುತಾಲಿಕ ಆಗ್ರಹಿಸಿದರು.

ಪಟ್ಟಣದ ಪೊಲೀಸ್​ ಠಾಣೆಗೆ ಶುಕ್ರವಾರ ಭೇಟಿ ನೀಡಿ ಮನವಿ ಸಲ್ಲಿಸಿ ಮಾತನಾಡಿ, ಅಣ್ಣಪ್ಪ ತಲೆಗೆ ಜೋರಾಗಿ ಹೊಡೆದ ಪೊಲೀಸ್​ ಮತ್ತು ಹೋಮ್​ಗಾರ್ಡ ಸಿಬ್ಬಂದಿ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ. ಕೂಡಲೇ ಹಲ್ಲೆಗೈದವರನ್ನು ಅಮಾನತುಗೊಳಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಸವದತ್ತಿ ಚಲೋಗೆ ಕರೆ ನೀಡಲಾಗುವುದು ಎಂದರು.

ಪಿಐ ಧರ್ಮಾಕರ ಧರ್ಮಟ್ಟಿ ಮಾತನಾಡಿ, ನಡೆದ ಟನೆ ಖಂಡಿಸುತ್ತೇವೆ. ಪ್ರಕರಣ ಕುರಿತು ದೂರು, ಪ್ರತಿದೂರು ದಾಖಲಾಗಿದ್ದು ಅಮಾನತು ಕುರಿತು ಮೇಲಧಿಕಾರಿಗಳೇ ಕ್ರಮ ಜರುಗಿಸಲಿದ್ದಾರೆ ಎಂದರು. ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ, ಪಿಎಸ್​ ಐ ಕಲ್ಮೇಶ ಬನ್ನೂರ, ರವಿ ಕೋಟೆತ್ಕರ, ಜಿಲ್ಲಾಧ್ಯ ವಿಠಲ ಗಡ್ಡಿ, ಮಂಜು ಕಾಟಕರ್​, ಗುಣಧರ ಧಳುತಿ, ಬಸವರಾಜ ಗೌಡರ, ಅನಿಲ ಕುಸನೂರ ಇತರರಿದ್ದರು.