ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಶರಣರ ಮೇಲಿನ ಲೈಂಗಿಕ ಕಿರುಕುಳದ ಪ್ರಕರಣವನ್ನು ಪಾರದರ್ಶಕ ಮತ್ತು ಕ್ಷಿಪ್ರಗತಿಯಲ್ಲಿ ತನಿಖೆ ನಡೆಯಬೇಕೆಂದು ಆಗ್ರಹಿಸಿ ಶುಕ್ರವಾರ ಜಿಲ್ಲಾಡಳಿತರದ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಯಿತು. ವಕೀಲ ಶ್ರೀನಾಥ್ ಪೂಜಾರಿ, ಮುಖಂಡರಾದ ಅಕ್ಷಯ ಕುಮಾರ ಅಜಮನಿ, ಆನಂದ ಮುದುರ, ಕಾಶಿನಾಥ ಕಟ್ಟಿಮನಿ, ಸತೀಶ ಅಂಜುಟಗಿ, ಸಿದ್ದಲಿಂಗ ಬಾಗೇವಾಡಿ ಇತರರಿದ್ದರು.  
ಜಿಲ್ಲೆ

ಮುರುಘಾಶ್ರೀ ಪ್ರಕರಣ ಪಾರದರ್ಶಕ ತನಿಖೆ ನಡೆಯಲಿ

ವಿಜಯಪುರ : ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಶರಣರ ಮೇಲಿನ ಲೈಂಗಿಕ ಕಿರುಕುಳದ ಪ್ರಕರಣವನ್ನು ಪಾರದರ್ಶಕ ಮತ್ತು ಕ್ಷಿಪ್ರಗತಿಯಲ್ಲಿ ತನಿಖೆ ನಡೆಯಬೇಕೆಂದು ಆಗ್ರಹಿಸಿ ಶುಕ್ರವಾರ ಜಿಲ್ಲಾಡಳಿತರದ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಯಿತು.

ಇದೇ ವೇಳೆ ವಕೀಲ ಶ್ರೀನಾಥ್ ಪೂಜಾರಿ ಮಾತನಾಡಿ, ಮುರುಘಾಶ್ರೀಗಳು ಗಂಭೀರ ಆರೋಪಕ್ಕೆ ಗುರಿಯಾಗಿz್ದÁರೆ. ರಾಜ್ಯದ ಪ್ರತಿಷ್ಠಿತ ಧಾರ್ಮಿಕ ಸಂಸ್ಥೆಗೆ ಶತಮಾನದ ಇತಿಹಾಸವಿದೆ. ಎರಡು ತಲೆಮಾರುಗಳ ಹಿಂದೆ ಜಯದೇವ ಮುರುಘಾ ಶ್ರೀಗಳು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಿದ ಮೊದಲ ಪುಣ್ಯಜೀವಿ. ಎತ್ತಿನ ಗಾಡಿಯಲ್ಲಿ ಹಳ್ಳಿ ಹಳ್ಳಿ ಸುತ್ತಿ ದವಸ ಧಾನ್ಯಗಳನ್ನು ಸಂಗ್ರಹಿಸಿ ವಿದ್ಯಾರ್ಥಿ ನಿಲಯಗಳನ್ನು ನಡೆಸಿದ ಕಾಯಕಜೀವಿ. ಈ ಪರಂಪರೆಯನ್ನು ಡಾ. ಶಿವಮೂರ್ತಿ ಶರಣರು ಮುಂದುವರೆಸಿದರು. ಅನೇಕ ಶಾಲಾ ಕಾಲೇಜುಗಳನ್ನು ಆರಂಭಿಸಿದರು. ಸಂಸ್ಕೃತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಸರು ಮಾಡಿದರು. ಗೌರವಾರ್ಹ ಪರಂಪರೆಯ ಮುರುಘಾ ಶ್ರೀಗಳು ಇದೀಗ ಆರೋಪಕ್ಕೆ ಗುರಿಯಾಗಿz್ದÁರೆ. ಅದು ನಿಜವೇ ಆಗಿದ್ದರೆ ಇದೊಂದು ಕಳಂಕವಾಗಿ ಉಳಿಯುತ್ತದೆ. ಹಾಗಾಗಿ ಪಾರದರ್ಶಕವಾಗಿ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಅಕ್ಷಯ ಕುಮಾರ ಅಜಮನಿ, ಆನಂದ ಮುದುರ, ಕಾಶಿನಾಥ ಕಟ್ಟಿಮನಿ, ಸತೀಶ ಅಂಜುಟಗಿ, ದರ್ಶನ ಸಾಲೋಟಗಿ, ಸಿದ್ದಲಿಂಗ ಬಾಗೇವಾಡಿ ಮುಂತಾದವರು ಇದ್ದರು.