ಜಿಲ್ಲೆ

ಒಕ್ಕಲಿಗರ ಒಗ್ಗಟ್ಟಿನ ಪ್ರದರ್ಶನವಾಗಲಿ

ಕನಕಪುರ: ಜಾತಿ ಗಣತಿಯಲ್ಲಿ ಒಕ್ಕಲಿಗ ಎಂದು ಬರೆಯುವ ಮೂಲಕ ಸಮುದಾಯದ ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಕರೆ ನೀಡಿದರು. ನಗರದ ಮೆಳೆಕೋಟೆ ಖಾಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ಒಕ್ಕಲಿಗರ ಸಂದಿಂದ ಹಮ್ಮಿಕೊಂಡಿದ್ದ ಜಾತಿಗಣತಿ ಜಾಗೃತಿ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಒಕ್ಕಲಿಗ ಪ್ರಾಬಲ್ಯ ಹೊಂದಿದ ಸಮುದಾಯವೇ ಆಗಿರಬಹುದು, ಆದರೆ ಒಗ್ಗಟ್ಟು&ಪರಸ್ಪರ ಸಹಕಾರ ಮನೋಭಾವ ಇಲ್ಲ. ಇವೆಲ್ಲವನ್ನು ಮೈಗೂಡಿಸಿಕೊಳ್ಳುವ ಅಗತ್ಯವಿದೆ, ಜಾತಿ ಗಣತಿ ವಿಚಾರದಲ್ಲಿ ಸಾಕಷ್ಟು ಸಂರ್ಷ, ವಿವಾದಗಳು ತಲೆದೂರಿವೆ. ಈ ಹಿನ್ನಲೆಯಲ್ಲಿಯೇ ಇಂದು ಒಕ್ಕಲಿಗರ ಸಮುದಾಯದ ಮಠಾಧೀಶರು, ಜನಪ್ರತಿನಿಧಿಗಳು, ಮುಖಂಡರು ಒಗ್ಗೂಡಿ ಸಮಾಲೋಚನೆ ನಡೆಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಲಾಗಿದೆ. ಒಟ್ಟಾರೆ ಜನಾಂಗದ ಹಿತ ಕಾಪಾಡಲು ಸಮೀೆ ಅನುಕೂಲವಾಗಬೇಕು. ಈ ನಿಟ್ಟಿನಲ್ಲಿ ಜಾತಿ ಗಣತಿಗೆ ಬರುವ ಸಿಬ್ಬಂದಿಗಳಿಗೆ ಎಲ್ಲರೂ ಸಹಕಾರ ನೀಡಬೇಕು, ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದು ನಮೂದಿಸಬೇಕು ಎಂದರು.

ಯದುನಂದನ್​ಗೌಡ, ಕಾಂತರಾಜು, ಬಿ.ಎಸ್​.ಗೌಡ, ಭೂಹಳ್ಳಿ ಉಮೇಶ್​, ಕುಮಾರಸ್ವಾಮಿ, ಸಿದ್ದರಾಜು, ಚಂದ್ರು, ಟಿ.ವಿ.ಪ್ರಕಾಶ್​ ಇತರರು ಇದ್ದರು.ಕನಕಪುರದಲ್ಲಿ ಹಮ್ಮಿಕೊಂಡಿದ್ದ ಜಾತಿ ಗಣತಿ ಜಾಗೃತಿ ಸಭೆಯನ್ನು ಶ್ರಿ ಅನ್ನದಾನೇಶ್ವರನಾಥ ಸ್ವಾಮೀಜಿ ಉದ್ಘಾಟಿಸಿದರು. ರಾಜ್ಯ ಒಕ್ಕಲಿಗರ ಸಂದ ನಿರ್ದೇಶಕ ವೆಂಕಟರಾಮೇಗೌಡ, ಮುಖಂಡರಾದ ಎಚ್​.ಕೆ.ಶ್ರೀಕಂಠು, ಡಿ.ಎಂ.ವಿಶ್ವನಾಥ್​, ಕೆ.ಪಿ.ಕುಮಾರ್​, ಬಿ.ನಾಗರಾಜ್​, ಕಾಡೇಗೌಡ, ಸಂಪತ್​ಕುಮಾರ್​, ಗ್ರಾಪಂ ಸದಸ್ಯ ಬೊಮ್ಮನಹಳ್ಳಿ ಕುಮಾರ್​ ಇದ್ದರು.