ಜಿಲ್ಲೆ

ಕ್ರೀಡಾಪಟುಗಳಲ್ಲಿ ಇರಲಿ ಸ್ಪರ್ಧಾ ಮನೋಭಾವ

ಇಂದಿರಾ ಎನ್ ಕೆ

ಕುಂದಾಪುರ: ಸ್ಪರ್ಧೆಯನ್ನು ಸ್ಪರ್ಧಾ ಮನೋಭಾವದಲ್ಲೇ ಕ್ರೀಡಾಪಟುಗಳು ಸ್ವೀಕರಿಸಬೇಕು. ಆಟದಲ್ಲಿ ಸೋಲು, ಗೆಲುವು ಎರಡು ಮುಖಗಳಾಗಿದ್ದು, ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಶರಣಕುಮಾರ ಹೇಳಿದರು.

ಸಿಐಎಸ್‌ಸಿಇ ಆಯೋಜಿಸಿದ 2025-2026ನೇ ಸಾಲಿನ ಕ್ರೀಡಾಕೂಟದ ಅಂಗವಾಗಿ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಸೋಮವಾರ ನಡೆದ ವಲಯಮಟ್ಟದ ಖೋಖೋ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.

ಪರ್ಕಳ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ, ಶ್ರೀಸಿದ್ಧಿವಿನಾಯಕ ವಸತಿ ಶಾಲೆಯ ಆಡಳಿತಾಧಿಕಾರಿ ವೀಣಾರಶ್ಮಿ ಎಂ., ಉಪಪ್ರಾಂಶುಪಾಲ ರಾಮ ದೇವಾಡಿಗ, ವಲಯ ಮಟ್ಟದ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಉಪಸ್ಥಿತರಿದ್ದರು. ಸೌಭಾಗ್ಯ ಸ್ವಾಗತಿಸಿದರು. ವಿಜಯಲಕ್ಷ್ಮೀ ವಂದಿಸಿದರು. ಅಭಿಜ್ಞಾ ಕಾರ್ಯಕ್ರಮ ನಿರೂಪಿಸಿದರು.

ವಿಭಾಗವಾರು ಪ್ರಶಸ್ತಿ ವಿಜೇತರು

ಹದಿನಾಲ್ಕರ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪ್ರಥಮ, ಸೈಂಟ್ ಫಿಲಿಪ್ಸ್ ಸ್ಕೂಲ್ ದ್ವಿತೀಯ ಹಾಗೂ ಹಟ್ಟಿಯಂಗಡಿ ಶಾಲೆ ತೃತೀಯ ಸ್ಥಾನ ಪಡೆಯಿತು. 17ರ ಬಾಲಕರ ವಿಭಾಗದಲ್ಲಿ ಹಟ್ಟಿಯಂಗಡಿ ಶಾಲೆ ಪ್ರಥಮ, ವಿದ್ಯೋದಯ ಪಬ್ಲಿಕ್ ಸ್ಕೂಲ್ ದ್ವಿತೀಯ ಹಾಗೂ ಟ್ರಿನಿಟಿ ಸೆಂಟ್ರಲ್ ಸ್ಕೂಲ್ ತೃತೀಯ ಸ್ಥಾನ ಪಡೆದುಕೊಂಡಿತು. ಬಾಲಕಿಯರ ವಿಭಾಗದಲ್ಲಿ ಹಟ್ಟಿಯಂಗಡಿ ಶಾಲೆ ಪ್ರಥಮ, ಟ್ರಿನಿಟಿ ಶಾಲೆ ದ್ವಿತೀಯ ಹಾಗೂ ವಿದ್ಯೋದಯ ಶಾಲೆ ತೃತೀಯ ಸ್ಥಾನ ಪಡೆಯಿತು.