ಮಹಲ್ ಐನಾಪುರ ಸಮೀಪದ ಆರ್.ಜಿ.ಮೆಮೊರಿಯಲ್ ಸ್ಕೂಲ್‌ನ ವಾರ್ಷಿಕ ಸ್ನೇಹ ಸಮ್ಮೇಳನವನ್ನು ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಪ್ರಕಾಶ್ ರಾಥೋಡ, ರಾಜುಗೌಡ ಪಾಟೀಲ ಇತರರಿದ್ದರು. 
ಜಿಲ್ಲೆ

ಮೌಲ್ಯಾಧರಿತ ಶಿಕ್ಷಣ ಸಿಗುವಂತಾಗಲಿ

Vijayapura - Desk - Gurappa Lokuri

ಮಹಲ್ ಐನಾಪುರ: ಮಕ್ಕಳಿಗೆ ಮೌಲ್ಯಾಧರಿತ ಶಿಕ್ಷಣ ಸಿಗುಂತಾಗಬೇಕು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ಆರ್.ಜಿ. ಮೆಮೊರಿಯಲ್ ಸ್ಕೂಲ್ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಗುರುಕುಲ ಪದ್ಧತಿ ಶಿಕ್ಷಣ, ಉತ್ತಮ ಸಂಸ್ಕಾರ, ದೇಶ ಪ್ರೇಮ, ತಂದೆ-ತಾಯಿ ಗೌರವಿಸುವುದು ಇಂದಿನ ಶಿಕ್ಷಣ ಪದ್ಧತಿಯಲ್ಲಿ ಅಳವಡಿಸಬೇಕು ಎಂದರು.

ಸಂಸ್ಥೆ ಅಧ್ಯಕ್ಷ ಪ್ರಕಾಶ್ ರಾಥೋಡ, ರಾಜುಗೌಡ ಪಾಟೀಲ(ನಾಧ) ಜಿ.ಎಂ. ರಾಠೋಡ, ಬಾಬು ಹಿಪ್ಪರಗಿ, ದಶರತ್ನಾಯಕ, ಉತ್ತಮ್ ಸುಸಲಾದಿ, ಜಗದೀಶ ಇಂಡಿ, ಜೆ.ಆರ್. ಬಂಡಿ, ಇಬ್ರಾಹಿಂ ವಡಗೇರಿ, ಮಲ್ಲಿಕಾರ್ಜುನ ಹಳ್ಳದ ಪಾಲ್ಗೊಂಡಿದ್ದರು.