ಚಿಕ್ಕಮಗಳೂರು: ಪರಿಶಿಷ್ಟ ಸಮುದಾಯಕ್ಕೆ ಮೀಸಲಿದ್ದ ಹುದ್ದೆಯನ್ನು ನ್ಯಾಯಸಮ್ಮತವಾಗಿ ಆ ಜನಾಂಗದ ವ್ಯಕ್ತಿಗಳಿಗೆ ನೀಡಬೇಕು ಎಂದು ದಲಿತ್ ಜನಜಾಗೃತಿ ವೇದಿಕೆ ಮುಖಂಡರುಗಳು ಶುಕ್ರವಾರ ಶಿರಸ್ತೇದಾರ್ ಹೇಮಂತ್ ಕುಮಾರ್ ಅವರ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ವೇದಿಕೆ ಅಧ್ಯಕ್ಷ ಹರೀಶ್‌ಮಿತ್ರ, ಕ್ಷಯರೋಗ ಆರೋಗ್ಯ ವಿಚಾರಕರ ಹುದ್ದೆ ಕಳೆದ ಸಾಲಿನಲ್ಲಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಮೀಸಲಾಗಿ ಅರ್ಜಿ ಕರೆಯಲಾಗಿತ್ತು. ಆ ಹುದ್ದೆಯನ್ನೇ ಬೇರೆ ಸಮುದಾಯಕ್ಕೆ ಸಂಬAಧಪಟ್ಟ ಅಧಿಕಾರಿಗಳು ನೀಡಿರುವುದು ಸರಿಯಲ್ಲ ಎಂದು ಆರೋಪಿಸಿದರು.
ಆರೋಗ್ಯ ಇಲಾಖೆ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಹುದ್ದೆ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ದಲಿತರಿಗೆ ನ್ಯಾಯ ಒದಗಿಸುತ್ತಿಲ್ಲ. ಈ ಬಗ್ಗೆ ಶಾಸಕರು ಎಚ್ಚೆತ್ತುಕೊಂಡು ನ್ಯಾಯ ಒದಗಿಸಿಕೊಡಬೇಕು. ನಿರ್ಲಕ್ಷÈ ವಹಿಸಿದರೆ ಮುಂದಿನ ದಿನದಲ್ಲಿ ನಿರಂತರ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಹೀಗಾಗಿ ಪರಿಶಿಷ್ಟ ಜಾತಿಗೆ ಸೀಮಿತವಾಗಿರುವ ಹುದ್ದೆಯನ್ನು ಇತರೆ ವರ್ಗಕ್ಕೆ ನೀಡಿರುವುದನ್ನು ರದ್ದು ಗೊಳಿಸಿ, ನ್ಯಾಯಸಮ್ಮತವಾಗಿ ಜನಾಂಗದ ವ್ಯಕ್ತಿಗೆ ದೊರಕಿಸಿಕೊಡಬೇಕು ಈ ಮೂಲಕ ಜನಾಂಗದ ಶ್ರೇಯೋಭಿವೃದ್ಧಿಗೆ ಪೂರಕವಾಗಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ದಲಿತಪರ ಮುಖಂಡರಾದ ಬಿ.ಎಂ.ಶAಕರ್, ಶೇಖರ್ ಗವನಹಳ್ಳಿ, ನವೀನ, ಸತೀಶ್‌ಪ್ರಭು, ಸೋಮಶೇಖರ್, ಹುಣಸೇಮಕ್ಕಿ ಲಕ್ಷö್ಮಣ್, ಕದ್ರಿಮಿದ್ರಿ ಲೋಕೇಶ್ ಮತ್ತಿತರರಿದ್ದರು.