ಸವದತ್ತಿ: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಣ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಅಂಕಗಳಿಗೆ ಸೀಮಿತರಾಗದೆ ಕೌಶಲ ಬೆಳೆಸಿಕೊಳ್ಳುವುದರತ್ತ ಗಮನಹರಿಸಬೇಕಾಗಿದೆ ಎಂದು ಬೆಲಹೊಂಗಲದ ಕೆಆರ್ಸಿಇಎಸ್ ಪದವಿ ಮಹಾವಿದ್ಯಾಲಯದ ನಿವತ್ತ ಪ್ರಾಧ್ಯಾಪಕ ಸಿ.ವಿ.ಜ್ಯೋತಿ ಅಭಿಪ್ರಾಯಪಟ್ಟರು.
ಇಲ್ಲಿನ ಕೆಎಲ್ಇ ಸಂಸ್ಥೆಯ ಎಸ್. ವಿ. ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಗುರುವಾರ 2024&25ನೆಯ ಸಾಲಿನ ಕ್ರೀಡಾ ಹಾಗೂ ಸಾಂಸತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಜರ್ಮನಿ, ಜಪಾನ್ ಮತ್ತು ್ರಾನ್ಸ್ ದೇಶದಲ್ಲಿ ಯುವ ಶಕ್ತಿ ದೇಶದ ಅಭಿವದ್ಧಿಗೆ ಬಳಕೆಯಾದರೆ, ಭಾರತದಲ್ಲಿ ಯುವ ಶಕ್ತಿ ರಾಜಕೀಯಕ್ಕೆ ಮಾತ್ರ ಬಳಕೆಯಾಗುತ್ತಿದೆ. ಎಂದರು.
ಕ್ರೀಡೆ ಮತ್ತು ಸಾಂಸ್ಕತಿಕ ಚಟುವಟಿಕೆಗಳಲ್ಲಿ ಸಾಧನೆ ಗೈದ ಸಹನಾ ತೋರಗಲ್ಲ, ಸ್ನೇಹಾ ಜಾನ್ವೆಕರ್, ಪ್ರವಿಣ್ ಕುದರಿ ಮತ್ತು ಕಾವೇರಿ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯ ಡಾ.ಎನ್.ಆರ್.ಸವತೀಕರ ಅಧ್ಯಕ್ಷತೆ ವಹಿಸಿದ್ದರು, ಪ್ರೊ. ವಿ.ಎಸ್.ಮೀಶಿ ಸ್ವಾಗತಿಸಿದರು, ಪ್ರೊ.ಕೆ.ರಾಮರೆಡ್ಡಿ ಪರಿಚಯಿಸಿದರು, ಡಾ.ಎ.ಎ್. ಬದಾಮಿ ಶೆಣಿಕ ಸಾಧನೆಗಳ ವರದಿ, ಪ್ರೊ. ಶಿವಾನಂದ ಹೊಳಿ ಕ್ರೀಡಾ ವರದಿ, ಪ್ರೊ.ಎಂ.ಸಿ.ಹಾದಿಮನಿ ಕ್ರೀಡಾ ಬಹುಮಾನಿತರ ಪಟ್ಟಿ, ಡಾ.ಎನ್.ಎ.ಕೌಜಗೇರಿ ಪ್ರಶಸ್ತಿ ಪುರಸತರ ಪಟ್ಟಿ ವಾಚಿಸಿದರು.
ರಾಜ್ಯಮಟ್ಟದ ಅರ್ಹತಾ ಪರೀೆಯಲ್ಲಿ ಉತ್ತೀರ್ಣರಾದ ಪ್ರೊ. ಬಿ.ಎಲ್.ರಾಯನಗೌಡ ಮತ್ತು ಪ್ರೊ. ಯಶೋಧ ಧೂಳಣ್ಣವರ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಪ್ರತಿನಿಧಿಗಳಾದ ಸಹನಾ ತೋರಗಲ್ಲ, ರೋಷನಿ ಪಟೇಲ್ ಇದ್ದರು. ಪ್ರೊ. ವಚನಾ ಬಸಿಡೋಣಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಶಿವಾನಂದ ಹೊಳಿ ವಂದಿಸಿದರು.