ವಿಜಯಪುರ: ವಿದೇಶಿ ವ್ಯಾಮೋಹ ಮತ್ತು ವೈಜ್ಞಾನಿಕ ಪ್ರಭಾವದಿಂದ ಯುವಜನತೆ ಜಾನಪದ ಸಂಸತಿ ಮರೆಯುತ್ತಿದ್ದಾರೆ. ಸಂಸ್ಕಾರವಿಲ್ಲದ ಶಿಣ ಪಡೆದು ಸಂಸಾರಕ್ಕೆ ಕಂಟಕವಾಗುತ್ತಿರುವ ಯುವಕರು ಜಾನಪದ ಸಂಸತಿ ಪ್ರೀತಿಸುವ ಜತೆಗೆ ಅದರಂತೆ ಬದುಕಲು ಮುಂದಾಗಬೇಕೆಂದು ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ(ಪಡಗಾನೂರ) ಹೇಳಿದರು.
ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕನ್ನಡ ಜಾನಪದ ಪರಿಷತ್ ಜಿಲ್ಲಾ ಟಕದ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಾನಪದ ಉತ್ಸವ &2025 ಅಡಿ ನಮ್ಮ ಸಂಸತಿ ನಮ್ಮ ಹೆಮ್ಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಾತನಾಡಿದರು.
ನಮ್ಮ ದೇಶದ ಸಂಸತಿ ಜಾನಪದ ಮೂಲಕ ಪರಂಪರಾಗತವಾಗಿ ನಡೆದುಕೊಂಡು ಬಂದಿದೆ. ಜಾನಪದದ ಆಚಾರ, ವಿಚಾರ, ನಂಬಿಕೆ ಮತ್ತು ಸಂಪ್ರದಾಯಗಳು ಮಾನವೀಯ ಮೌಲ್ಯಗಳನ್ನು ಬಿಂಬಿಸುತ್ತಿವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎ.ಐ. ಹಂಜಗಿ ಮಾತನಾಡಿ, ಜಾನಪದ ನಡೆ&ನುಡಿ ತಾಯಿಯ ಎದೆಹಾಲಿನಂತೆ ಅಮೃತಕ್ಕೆ ಸಮಾನ. ಪ್ರಾಚಿನರು ಹಾಕಿಕೊಟ್ಟ ಜಾನಪದದ ಹೆಜ್ಜೆ ಗುರುತುಗಳು ಸದ್ಯ ನಮ್ಮ ಬದುಕಿಗೆ ದಾರಿದೀಪಗಳಾಗಿವೆ. ತಾಯಿ ಜಾನಪದ ಸಂಸತಿ ಮಕ್ಕಳಲ್ಲಿ ತುಂಬುವ ಮೊದಲ ಗುರು ಎಂದು ತಿಳಿಸಿದರು.
ಕಾಲೇಜಿನ ಸಾಂಸತಿಕ ಸಂಚಾಲಕ ಡಾ. ಬಸವನಗೌಡ ಶ್ಯಾಡದಳ್ಳಿ, ಕಾಲೇಜಿನ ಐಕ್ಯೂಎಸಿ ಸಂಚಾಲಕ ಆರ್.ಎಸ್. ಕುರಿ ಮಾತನಾಡಿದರು. ಕಾಖಂಡಕಿಯ ಕಮಲವ್ವ ಸಿದರಡ್ಡಿ ತಂಡದಿಂದ ಚೌಡಕಿ ಪದಗಳ ಪ್ರದರ್ಶನ ನಡೆಯಿತು. ನಂತರ ಕಲಾವಿದರನ್ನು ಸನ್ಮಾನಿಸಲಾಯಿತು.
ಜಾನಪದ ಸಂಸತಿ ಅಂಗವಾಗಿ ವಿದ್ಯಾರ್ಥಿಗಳಿಗೆ ಹಗ್ಗಜಗ್ಗಾಟ, ಲಗೋರಿ, ಬುಗುರಿ, ಗೋಣಿ ಚೀಲ ಆಟ, ಕುಂಟೆಬಿಲ್ಲೆ, ಜಾನಪದ ನೃತ್ಯ, ದೇಶೀಯ ಆಹಾರ, ಡೊಳ್ಳು ಕುಣಿತ ಸೇರಿ ಮುಂತಾದ ಸ್ಫರ್ಧೆಗಳು ನಡೆದವು. ಕಜಾಪ ಜಿಲ್ಲಾ ಕಾರ್ಯದರ್ಶಿ ಡಾ. ರಮೇಶ ತೇಲಿ ನಿರೂಪಿಸಿದರು. ಉಪನ್ಯಾಸಕ ಎಂ.ಎಸ್. ಖೋದ್ನಾಪುರ ವಂದಿಸಿದರು.ಫೋಟೋ : ಎಂಎಂ 27&3
ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಾನಪದ ಉತ್ಸವವನ್ನು ಬಾಳನಗೌಡ ಪಾಟೀಲ ಉದ್ಘಾಟಿಸಿದರು. ಡಾ. ಎ.ಐ. ಹಂಜಗಿ, ಡಾ. ಬಸವನಗೌಡ ಶ್ಯಾಡದಳ್ಳಿ ಮತ್ತಿತರರಿದ್ದಾರೆ.