ಕಾರ್ಕಳ: ಸದೃಢ ಯುವಕರು ಸೈನ್ಯ ಸೇರಿ ದೇಶ ಸೇವೆಗೆ ಸದಾ ಮುಂದಾಗಬೇಕು ಎಂದು ಕಾರ್ಗಿಲ್ ಯೋಧ, ವಾಜಿ ಸೈನಿಕ ರಂಗಪ್ಪ ಹುಲಿಯಪ್ಪ ಆಲೂರು ಹೇಳಿದರು. ಕಾರ್ಕಳ ಎಸ್‌ವಿಟಿ ಶಿಕ್ಷಣ ಸಂಸ್ಥೆಗಳು ಹಾಗೂ ರೋಟರಿ ಕ್ಲಬ್ ಕಾರ್ಕಳ ಮತ್ತು ಇಂಟರಾಕ್ಟ್ ಕ್ಲಬ್ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಕಾರ್ಗಿಲ್ ವಿಜಯೋತ್ಸವ ಸವಾರಂಭದಲ್ಲಿ ವಾತನಾಡಿದರು. ಭೂಸೇನೆ ವಾಜಿ ಯೋಧ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮರಿಯಪ್ಪ ಸೇನೆಯ ಅನುಭವಗಳನ್ನು ಹಂಚಿಕೊಂಡರು. ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಕಾರ್ಯದರ್ಶಿ ಚೇತನ್ ನಾಯಕ್, ಇಂಟರಾಕ್ಟ್ ಕ್ಲಬ್ ಅಧ್ಯಕ್ಷೆ ವೀಶ್ವರಿ, ಎಸ್‌ವಿಟಿ ವಿದ್ಯಾಸಂಸ್ಥೆಗಳ ಮುಖ್ಯಸ್ಥರಾದ ನೇಮಿರಾಜ್ ಶೆಟ್ಟಿ, ಯೋಗೇಂದ್ರ ನಾಯಕ್, ಗೀತಾ ಜಿ., ವಾಲಿನಿ ಕೆ., ಹನುಮಂತ ಗುರುವಪ್ಪ ಬಂಡಿವಡ್ಡರ್ ಉಪಸ್ಥಿತರಿದ್ದರು. ಎಸ್‌ವಿಟಿ ಪ್ರೌಢಶಾಲೆ ವಿಭಾಗದ ಕನ್ನಡ ಅಧ್ಯಾಪಕ ದೇವದಾಸ್ ಕೆರೆಮನೆ ಕಾರ್ಯಕ್ರಮ ನಿರೂಪಿಸಿದರು. ಪದವಿ ಪೂರ್ವ ವಿಭಾಗದ ಕನ್ನಡ ಉಪನ್ಯಾಸಕ ಪದ್ಮಪ್ರಭ ಇಂದ್ರ ಸ್ವಾಗತಿಸಿದರು. ಹಿಂದಿ ಭಾಷಾ ಶಿಕ್ಷಕಿ ಪ್ರಭಾ ಭೋವಿ ವಂದಿಸಿದರು.
ಕಾರ್ಗಿಲ್ ಯೋಧ, ವಾಜಿ ಸೈನಿಕ ರಂಗಪ್ಪ ಹುಲಿಯಪ್ಪ ಆಲೂರು, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಯೋಧ ಮರಿಯಪ್ಪ ಅವರನ್ನು ಸನ್ಮಾನಿಸಲಾಯಿತು. ಎಸ್‌ವಿಟಿ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು, ಶಿಕ್ಷಕೇತರ ವೃಂದ ಹಾಗೂ ರೋಟರಿ ಕ್ಲಬ್ ವತಿಯಿಂದ ಸಂಗ್ರಹಿಸಿದ ನಿಧಿ ಹಸ್ತಂತರಿಸಲಾಯಿತು.
ಕಾರ್ಗಿಲ್ ಆರು ತಿಂಗಳ ಕಾಲ ಹಿಮದಿಂದ ಕೂಡಿರುವ ಪ್ರದೇಶ. ಸುವಾರು 60 ದಿನಗಳ ಕಾಲ ನಿರಂತರ ಹೋರಾಟ ನಡೆಸಿ ಕಾರ್ಗಿಲ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಭಾರತದ ಸೈನ್ಯ ಶಕ್ತಿಯನ್ನು ಜಗತ್ತಿಗೆ ತೋರಿಸಿದ ದಿನ. ಕಾರ್ಗಿಲ್ ಯುದ್ಧದಲ್ಲಿ ತ್ಯಾಗ ಬಲಿದಾನಗೈದ ವೀರ ಸೈನಿಕರಿಗೆ ಕಳೆದ 26 ವರ್ಷಗಳಿಂದ ನಿರಂತರವಾಗಿ ನಮನ ಸಲ್ಲಿಸುತ್ತಾ ಬಂದಿದೆ. ಭಾರತೀಯ ಸೈನೆ ಆರ್ಥಿಕವಾಗಿ ಮತ್ತು ವೈಜ್ಞಾನಿಕವಾಗಿ ಪ್ರಬಲವಾಗಿದೆ. ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವಿಧಾನ ಪರಿಷತ್ ಮಾಜಿ ಸದಸ್ಯ https://www.vijayavani.net/legal-awareness-information-workshop https://www.vijayavani.net/it-is-our-responsibility-to-preserve-tulu-culture