ಬೀಳಗಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ನಿರ್ದೇಶಕ ವಿವೇಕಾನಂದ ಎಂ. ಪಾಟೀಲ ಮಾತನಾಡಿದರು. ಸಂಸ್ಥಾಪಕ ಕಾರ್ಯಾಧ್ಯಕ್ಷ ಎಂ. ಎನ್. ಪಾಟೀಲ, ನಿರ್ದೇಶಕರಾದ ಸಂತೋಷ ಜಂಬಗಿ, ವಿಠ್ಠಲ ನಿಂಬಾಳ್ಕರ ಇತರರಿದ್ದರು. 
ಜಿಲ್ಲೆ

ಯುವಶಕ್ತಿ ದೇಶದ ಅಭಿವೃದ್ಧಿಗೆ ಕೈ ಜೋಡಿಸಲಿ

ಬೀಳಗಿ: ದೇಶಕ್ಕೆ ಸ್ವಾತಂತ್ರೃ ತಂದು ಕೊಟ್ಟ ಮಹಾನ್ ನಾಯಕರಿಗೆ ನಾವೆಲ್ಲರೂ ಗೌರವ ಸಮರ್ಪಣೆ ಮಾಡಲು ಮುಂದಾಗಬೇಕಿದೆ ಎಂದು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ನಿರ್ದೇಶಕ ವಿವೇಕಾನಂದ ಎಂ. ಪಾಟೀಲ ಹೇಳಿದರು.

ಸ್ಥಳೀಯ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರೊೃೀತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದ ನಮ್ಮ ದೇಶಕ್ಕೆ ಸ್ವಾತಂತ್ರೃ ದೊರಕಿಸಲು ಮಹಾತ್ಮಗಾಂಧಿ, ಸುಭಾಷ್‌ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರು, ಡಾ. ಬಿ.ಆರ್. ಅಂಬೇಡ್ಕರ್, ಭಗತ್‌ಸಿಂಗ್, ಸ್ವಾಮಿ ವಿವೇಕಾನಂದ ಸೇರಿ ಹಲವಾರು ಮಹನೀಯರ ಕೊಡುಗೆ ಅಪಾರವಾಗಿದೆ. ಯುವಶಕ್ತಿ ದೇಶದ ಅಭಿವೃದ್ಧಿಗೆ ಕೈಜೋಡಿಸಿ ರಾಷ್ಟ್ರಪ್ರೇಮ ಮೈಗೂಡಿಸಿಕೊಂಡು ರಾಷ್ಟ್ರದ ಸಂಪತ್ತಾಗಿ ಹೊರಹೊಮ್ಮಬೇಕಾಗಿದೆ ಎಂದರು.

ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಸಂಸ್ಥಾಪಕ ಕಾರ್ಯಾಧ್ಯಕ್ಷ ಎಂ. ಎನ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಸಂತೋಷ ಜಂಬಗಿ, ವಿಠ್ಠಲ ನಿಂಬಾಳ್ಕರ್, ಎಸ್‌ವಿವಿಎಸ್ ಕ್ಯಾಂಪ್ ಸಲಹಾ ಸಮಿತಿ ಸದಸ್ಯ ಶ್ರೀಶೈಲ ತುಂಬರಮಟ್ಟಿ, ಸಿದ್ದನಗೌಡ ಪಾಟೀಲ, ಎಂ.ಆರ್. ಮಲ್ಲಾಪುರ, ಗ್ಯಾನಪ್ಪ ಮಸೂತಿ, ಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಿ.ಎಸ್. ಕುಂಠೆ, ಕಾಲೇಜಿನ ಆರ್. ಬಿ. ದಳವಾಯಿ, ಶಂಕರಗೌಡ ಆರ್. ಪಾಟೀಲ, ಪ್ರಾಚಾರ್ಯ ಜಿ. ಆರ್. ಪಾಟೀಲ ಹಾಗೂ ಸಿಬ್ಬಂದಿ ಇದ್ದರು.

ನಂತರ ಶಾಲೆ ಮಕ್ಕಳಿಂದ ದೇಶಭಕ್ತಿ ಕಾರ್ಯಕ್ರಮಗಳು ನಡೆದವು.