ಕುರುಗೋಡು ಕಲ್ಲುಕಂಬದಲ್ಲಿ ಯುವಕರು ಆಯೋಜಿಸಿದ್ದ ಐದನೇ ಆವೃತ್ತಿಯ ಕೆಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಥಮ ಸ್ಥಾನ ಪಡೆದ ಆರ್‌ಸಿಬಿ ಲಕ್ಕಿ ಬಾಯ್ಸ ಹಾಗೂ ದ್ವಿತೀಯ ಸ್ಥಾನ ಪಡೆದ ಹಿಟೌಟ್ ತಂಡಕ್ಕೆ ಕಪ್ ವಿತರಿಸಲಾಯಿತು. ಕಾಂಗ್ರೆಸ್ ಪ್ರಮುಖ ಬಳ್ಳಾರಿ ಟಿ ಗಂಗಾಧರ್, ದಮ್ಮೂರು ಹೊನ್ನುರ ಸ್ವಾಮಿ, ಜಾನಿ, ಮಹೇಶ, ಪಂಪಾ, ಶಂಭುಸ್ವಾಮಿ, ಕಲ್ಲುಕಂಬ ಮಲ್ಲಿಕಾರ್ಜುನ, ಎರ‌್ರಿಸ್ವಾಮಿ, ಕಾಗಿ ಶೇಖಣ್ಣ, ಎಚ್ ಮಲ್ಲೇಶಪ್ಪ, ಎಚ್ ಮಲ್ಲಿ, ಎಚ್ ದುರ್ಗಪ್ಪ ಇತರರಿದ್ದರು. 
ಜಿಲ್ಲೆ

ಮೊಬೈಲ್‌ಫೋನ್ ಗಿಳಿನಿಂದ ಯುವಕರು ಹೊರಬರಲಿ

ಕುರುಗೋಡು: ಕಣ್ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ ಎಂದು ಕಾಂಗ್ರೆಸ್ ಪ್ರಮುಖ ಬಳ್ಳಾರಿ ಟಿ ಗಂಗಾಧರ್ ಅಭಿಪ್ರಾಯಪಟ್ಟರು. ತಾಲೂಕಿನ ಕಲ್ಲುಕಂಬ ಗ್ರಾಮದಲ್ಲಿ ಆಯೋಜಿಸಿದ್ದ ಐದನೇ ಆವೃತ್ತಿಯ ಕೆಪಿಎಲ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.

ಪ್ರಸ್ತುತ ಯುವಕರು ಸ್ಮಾರ್ಟ್ ಫೋನ್ ಗಿಳಿನಿಂದ ಕ್ರಿಕೆಟ್, ಕಬ್ಬಡಿ, ವಾಲಿಬಾಲ್ ಸೇರಿ ಇತರ ಗ್ರಾಮೀಣ ಕ್ರೀಡೆಯ ಬಗ್ಗೆ ನಿರಾಸಕ್ತಿ ಹೊಂದಿದ್ದಾರೆ. ಅದರಲ್ಲೂ ಪಬ್ಜಿ, ಫ್ರೀ ಫೈರ್ ಮೊಬೈಲ್ ಗೇಮ್‌ಗಳಿಂದ ಯುವಕರು ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗುತ್ತಿದ್ದಾರೆ.

ಇದರಿಂದ ಹೊರಬರುವ ನಿಟ್ಟಿನಲ್ಲಿ ಕ್ರೀಡೆಯು ಸಹಕಾರಿಯಾಗಿದೆ ಎಂದರು. ಟೂರ್ನಿಯಲ್ಲಿ ಪ್ರಥಮ ಸ್ಥಾನ ಪಡೆದ ಆರ್‌ಸಿಬಿ ಲಕ್ಕಿ ಬಾಯ್ಸ ಹಾಗೂ ದ್ವಿತೀಯ ಸ್ಥಾನ ಪಡೆದ ಹಿಟೌಟ್ ತಂಡಕ್ಕೆ ಕಪ್ ವಿತರಿಸಲಾಯಿತು.