ತೇರದಾಳ ಪಟ್ಟಣದ ದೇವರಾಜ ನಗರದ ಶಿವಾನಂದ ಮಠದಲ್ಲಿ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ ನಡೆಯಿತು. ಅಂಬಾಭವಾನಿ ಮರಾಠ ಮಂಡಳಿ ಉಪಾಧ್ಯಕ್ಷ ಈಶ್ವರ ಸಾಳುಂಕಿ, ಸಮಾಜದ ಅಧ್ಯಕ್ಷ ಮಹಾದೇವ ಶಿಂದೆ, ಸುನೀಲ ಮಾನೆ ಇತರರಿದ್ದರು. 
ಜಿಲ್ಲೆ

ಯುವಕರು ದೇಶಪ್ರೇಮ ಬೆಳೆಸಿಕೊಳ್ಳಲಿ

ತೇರದಾಳ: ದೇಶ ವಿರೋಧಿಗಳನ್ನು ಈ ನಾಡಿನಿಂದ ಹೊರ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ ಛತ್ರಪತಿ ಶಿವಾಜಿ ದೇಶಪ್ರೇಮ ಯುವಕರಿಗೆ ಮಾದರಿಯಾಗಿದೆ ಎಂದು ಅಂಬಾಭವಾನಿ ಮರಾಠ ಮಂಡಳಿ ಉಪಾಧ್ಯಕ್ಷ ಈಶ್ವರ ಸಾಳುಂಕಿ ಹೇಳಿದರು.

ಸಮಾಜದ ವತಿಯಿಂದ ದೇವರಾಜ ನಗರದ ಶಿವಾನಂದ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸುನೀಲ ಮಾನೆ ಮಾತನಾಡಿ, ಸಮಾಜದವರು ಮಕ್ಕಳಿಗೆ ಶಿಕ್ಷಣ ಜತೆಗೆ ದೇಶಪ್ರೇಮ ಮೂಡಿಸುವ ಕೆಲಸ ಮಾಡಬೇಕು. ಶಿವಾಜಿಯಂತಹ ವೀರರನ್ನು ಕಂಡ ಮರಾಠ ಸಮಾಜ ಧನ್ಯ ಎಂದರು.

ಶಿವಾಜಿ ಮೂರ್ತಿಗೆ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವ ನಡೆಯಿತು. ಮಹಿಳೆಯರು ಕೇಸರಿ ಶಾಲು ಹಾಕಿಕೊಂಡು ಗಮನ ಸೆಳೆದರು. ಸಮಾಜದ ಅಧ್ಯಕ್ಷ ಮಹಾದೇವ ಶಿಂದೆ ಅಧ್ಯಕ್ಷತೆ ವಹಿಸಿದ್ದರು.

ಶಿವಾನಂದ ಹನಗಂಡಿ ಪೂಜೆ ಸಲ್ಲಿಸಿದರು. ಸಾಗರ ಗಾಯಕವಾಡ, ರಮೇಶ ಬೋಸ್ಲೆ, ರವಿ ಜಾಧವ, ಜ್ಯೋತಿಭಾ ಪರಮಾನಟ್ಟಿ, ಅನ್ನಪೂರ್ಣ ಹನಗಂಡಿ, ನಿರ್ಮಲಾ ಪರಮಾನಟ್ಟಿ, ವಿಲಾಸಬಾಯಿ ಮಾನೆ, ರತ್ನ ಜಾಧವ, ಶೋಭಾ ಸಿಂದೆ, ರೇಣುಕಾ ತೀರ್ಥ, ಸಾವಿತ್ರಿ ರಾಯಚೂರ, ರೂಪಾ ಗುಳೇದಗುಡ್ಡ, ರಾಧಾ ಮೂಲಿಮನಿ, ಮಹಾನಂದಾ ಮಾನೆ, ಸುವರ್ಣಾ ಪರಮಾನಟ್ಟಿ ಮತ್ತಿತರಿದ್ದರು.